ADVERTISEMENT

ಶಿವಮೊಗ್ಗ: ಒಂದೇ ದಿನ 56 ಮಂದಿ ಗುಣಮುಖ, 33 ಜನರಿಗೆ ಸೋಂಕು

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 13:57 IST
Last Updated 6 ನವೆಂಬರ್ 2020, 13:57 IST

ಶಿವಮೊಗ್ಗ: ಜಿಲ್ಲೆಯಲ್ಲಿ ಗುರುವಾರ 2,561 ಜನರ ಗಂಟಲು ದ್ರವ ಪರೀಕ್ಷೆನಡೆಸಲಾಗಿದೆ. 2,178 ಜನರ ವರದಿ ನೆಗೆಟಿವ್ ಬಂದಿದೆ. 56 ಜನರು ಗುಣಮುಖರಾಗಿದ್ದಾರೆ. 33 ಮಂದಿಗೆ ಸೋಂಕು ದೃಢಪಟ್ಟಿದೆ.

ಮನೆಯಲ್ಲಿ 145 ಸೇರಿ ಒಟ್ಟು 250 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 347ಕ್ಕೆ ಏರಿದೆ. ಸೋಂಕಿತರ ಸಂಖ್ಯೆ 20,991ಕ್ಕೆ ತಲುಪಿದೆ. ಈವರೆಗೆ 19,932 ಮಂದಿ ಗುಣಮುಖರಾಗಿದ್ದಾರೆ.

ಶಿವಮೊಗ್ಗ ತಾಲ್ಲೂಕಿನಲ್ಲಿ 10, ಭದ್ರಾವತಿಯಲ್ಲಿ 7, ಶಿಕಾರಿಪುರದಲ್ಲಿ 8, ತೀರ್ಥಹಳ್ಳಿಯಲ್ಲಿ ಒಬ್ಬರು, ಸೊರಬದಲ್ಲಿ ಇಬ್ಬರು, ಸಾಗರದಲ್ಲಿ ಮೂವರು, ಹೊಸನಗರದಲ್ಲಿ ಇಬ್ಬರಿಗೆ ಸೋಂಕು ತಗುಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.