ADVERTISEMENT

ಕೊರೊನಾ: ಶಿವಮೊಗ್ಗ ಜಿಲ್ಲೆಯಲ್ಲಿ 3,714 ಜನರ ವರದಿ ನೆಗೆಟಿವ್

258 ಮಂದಿಗೆ ಕೊರೊನಾ ಸೋಂಕು ದೃಢ, 196 ಮಂದಿ ಗುಣಮುಖ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2020, 3:40 IST
Last Updated 8 ಅಕ್ಟೋಬರ್ 2020, 3:40 IST

ಶಿವಮೊಗ್ಗ: ಜಿಲ್ಲೆಯಲ್ಲಿ ಬುಧವಾರಒಂದೇ ದಿನ 4356ಜನರ ಗಂಟಲಿನ ದ್ರವ ಪರೀಕ್ಷೆ ಮಾಡಲಾಗಿದ್ದು, 3,714 ಜನರ ವರದಿ ನೆಗೆಟಿವ್ ಬಂದಿದೆ. 258 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 196 ಮಂದಿ ಗುಣಮುಖರಾಗಿದ್ದಾರೆ.

ಮನೆಯಲ್ಲಿ 1336 ಸೇರಿ ಒಟ್ಟು 1973 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ಕೋವಿಡ್‌-19ನಿಂದ ಮೃತಪಟ್ಟವರ ಸಂಖ್ಯೆ 310ಕ್ಕೆ ಏರಿದೆ. ಸೋಂಕಿತರ ಸಂಖ್ಯೆ 17,445ಕ್ಕೆ ತಲುಪಿದೆ.

ಶಿವಮೊಗ್ಗ ತಾಲ್ಲೂಕಿನಲ್ಲಿ 132 ಸೋಂಕಿತರು ಪತ್ತೆಯಾಗಿದ್ದಾರೆ. ಭದ್ರಾವತಿಯಲ್ಲಿ 40, ಶಿಕಾರಿಪುರದಲ್ಲಿ 23, ತೀರ್ಥಹಳ್ಳಿಯಲ್ಲಿ 15, ಸೊರಬದಲ್ಲಿ 13, ಸಾಗರದಲ್ಲಿ 14,ಹೊಸನಗರದಲ್ಲಿ 14 ಹಾಗೂ ಇತರೆ ಜಿಲ್ಲೆಗಳಿಂದ ಚಿಕಿತ್ಸೆಗೆ ಬಂದಿದ್ದ 7 ಜನರಲ್ಲಿ ಸೋಂಕು
ಖಚಿತಪಟ್ಟಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.