ಸಾವು
ಪ್ರಾತಿನಿಧಿಕ ಚಿತ್ರ
ಸೊರಬ: ತಾಲ್ಲೂಕಿನ ಕಪ್ಪಗಳಲೆ ಗ್ರಾಮದಲ್ಲಿ ಗುರುವಾರ ಒಣಗಲು ಹಾಕಿದ್ದ ಬಟ್ಟೆ ತೆಗೆಯಲು ಹೋದಾಗ ವಿದ್ಯುತ್ ಸ್ಪರ್ಶಿಸಿ ದಂಪತಿ ಸಾವಿಗೀಡಾಗಿದ್ದಾರೆ.
ಗ್ರಾಮದ ನಿವಾಸಿ ಕೃಷ್ಣಪ್ಪ (53) ಹಾಗೂ ಪತ್ನಿ ವಿನೋದಾ (43) ಮೃತಪಟ್ಟಿದ್ದಾರೆ.
ಮನೆಯ ಬಳಿಯ ತಂತಿಯಲ್ಲಿ ಬಟ್ಟೆ ಒಣಗಲು ಹಾಕಿದ್ದು, ಗಾಳಿಗೆ ಕಡಿತಗೊಂಡ ವಿದ್ಯುತ್ ತಂತಿ ಅದರ ಮೇಲೆ ಬಿದ್ದಿದೆ. ಮಳೆ ಶುರುವಾದ ಕಾರಣ ಬಟ್ಟೆಗಳ ತೆಗೆದುಕೊಳ್ಳಲು ವಿನೋದಮ್ಮ ತೆರಳಿದ್ದು, ಈ ವೇಳೆ ಅವರಿಗೆ ವಿದ್ಯುತ್ ಶಾಕ್ ಹೊಡೆದಿದೆ. ಕೂಗಿಕೊಂಡ ಪತ್ನಿಯ ರಕ್ಷಣೆಗೆ ಕೃಷ್ಣಪ್ಪ ಧಾವಿಸಿದ್ದು, ಅವರಿಗೂ ತಂತಿ ತಗುಲಿ ವಿದ್ಯುತ್ ಪ್ರಸರಿಸಿ ಇಬ್ಬರೂ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.
ದಂಪತಿಗೆ ಇಬ್ಬರು ಪುತ್ರಿಯರು ಹಾಗೂ ಪುತ್ರ ಇದ್ದಾರೆ.
ಸೊರಬ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.