ADVERTISEMENT

ವೈದ್ಯಕೀಯ ಕಾಲೇಜು: ಅಧೀಕ್ಷಕರ ವಿರುದ್ಧ ನಕಲಿ ಸಹಿ ಪ್ರಕರಣ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2018, 13:26 IST
Last Updated 1 ಡಿಸೆಂಬರ್ 2018, 13:26 IST

ಶಿವಮೊಗ್ಗ:ಇಲ್ಲಿನ ಸರ್ಕಾರಿ ವೈದ್ಯಕೀಯ ಕಾಲೇಜಿನ ಕಚೇರಿ ಅಧೀಕ್ಷಕ ಮಹಾಂತೇಶ್ ಮಿಟ್ಟಲಕೊಡೆ ಅವರ ವಿರುದ್ಧಸಹಿ ದುರ್ಬಳಕೆ ಆರೋಪದ ಮೇಲೆಪ್ರಕರಣ ದಾಖಲಿಸಲಾಗಿದೆ.

ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿದ್ದು, ಅಧೀಕ್ಷಕರ ಹುದ್ದೆ ಅಲಂಕರಿಸಲು ಅವಕಾಶ ಇಲ್ಲಿದ್ದರೂ ಮೇಲಧಿಕಾರಿಗಳ ಸಹಿ ನಕಲು ಮಾಡಿ ಹುದ್ದೆ ಗಿಟ್ಟಿಸಿಕೊಂಡಿದ್ದರು ಎಂಬ ಆರೋಪ ಅವರ ಮೇಲಿದೆ.

ಪ್ರಸಕ್ತ ವರ್ಷದ ಸೆಪ್ಟೆಂಬರ್‌ಗೆ ಅವರ ಗುತ್ತಿಗೆ ಅವಧಿ ಮುಗಿದಿದೆ. ಅವರನ್ನು ನವೀಕರಿಸುವಂತೆ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಆದರೆ, ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿರುವ ಕಾರಣ ನೇಮಕಾತಿ ನವೀಕರಣ ತಡೆಹಿಡಿಯಲಾಗಿದೆ. ಅವರು ನಿರ್ವಹಿಸುವ ಎಲ್ಲ ಕಡತನಗಳನ್ನು ಹಸ್ತಾಂತರಿಸುವಂತೆ ಸೂಚಿಸಲಾಗಿದೆ ಎಂದು ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕರು ಮಾಹಿತಿ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.