ADVERTISEMENT

ಭದ್ರಾವತಿ: ರೌಡಿ ಶೀಟರ್ ಮುಜಾಹಿದ್ದಿನ್ ಅಲಿಯಾಸ್ ಮುಜ್ಜು ಕೊಲೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2023, 4:57 IST
Last Updated 21 ಜುಲೈ 2023, 4:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭದ್ರಾವತಿ: ಇಲ್ಲಿನ ಬೊಮ್ಮನಕಟ್ಟೆ ಬಡಾವಣೆಯಲ್ಲಿ ಗುರುವಾರ ತಡರಾತ್ರಿ ಮನೆಯ ಮುಂದೆ ರೌಡಿಶೀಟರ್ ಕೊಲೆ ಮಾಡಲಾಗಿದೆ.

ಮುಜಾಹಿದ್ದಿನ್ ಅಲಿಯಾಸ್ ಮುಜ್ಜು (35) ಕೊಲೆಯಾದವನು. ಮುಜ್ಜು ಬೊಮ್ಮನಕಟ್ಟೆ ಬಡಾವಣೆಯಲ್ಲಿನ ತನ್ನ ಎರಡನೇ ಪತ್ನಿ ಮನೆಯಲ್ಲಿದ್ದಾಗ ತಡರಾತ್ರಿ ಕೆಲವರು ಮಾತನಾಡಲು ಹೊರಗೆ ಕರೆದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಮುಜ್ಜು ವಿರುದ್ಧ ಕೊಲೆ, ಕೊಲೆ ಯತ್ನ ಸೇರಿದಂತೆ ನಾಲ್ಕು ಪ್ರಕರಣಗಳು ಭದ್ರಾವತಿಯ ವಿವಿಧ ಠಾಣೆಗಳಲ್ಲಿ ದಾಖಲಾಗಿವೆ.

ADVERTISEMENT

ಪೇಪರ್ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆರೋಪಿಗಳು,

ಕೊಲೆಗೆ ಕಾರಣ ಪತ್ತೆಯಾಗಬೇಕಿದೆ ಎಂದು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.