
ಶಿವಮೊಗ್ಗ ಇಸ್ಕಾನ್ ಅಂತರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದಿಂದ ಶುಕ್ರವಾರ ಕಾರ್ತೀಕ ದಾಮೋದರ ದೀಪೋತ್ಸವ ನಗರದ ಸಿದ್ದಾರೂಢನಗರದ ಬಸವೇಶ್ವರ ಸಭಾಭವನದಲ್ಲಿ ಯಶಸ್ವಿಯಾಗಿ ನಡೆಯಿತು.
ಭದ್ರಾವತಿ: ಶಿವಮೊಗ್ಗ ಇಸ್ಕಾನ್ ಅಂತರರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಘದಿಂದ ಶುಕ್ರವಾರ ಕಾರ್ತಿಕ ದಾಮೋದರ ದೀಪೋತ್ಸವ ಸಿದ್ದಾರೂಢ ನಗರದ ಬಸವೇಶ್ವರ ಸಭಾ ಭವನದಲ್ಲಿ ಯಶಸ್ವಿಯಾಗಿ ನಡೆಯಿತು.
ನಗರದ ಹೊಸಮನೆ ಹಿಂದೂ ಮಹಾಸಭಾ– ಹಿಂದೂ ರಾಷ್ಟ್ರ ಸೇನಾ ವಿನಾಯಕ ಸ್ವಾಮಿ ದೇವಸ್ಥಾನದಿಂದ ಇಸ್ಕಾನ್ ರಾಜ್ಯ ಪ್ರಾದೇಶಿಕ ಕಾರ್ಯದರ್ಶಿ ಸುಧೀರ್ ಚೈತನ್ಯ ಪ್ರಭು ನೇತೃತ್ವದಲ್ಲಿ ಆರಂಭಗೊಂಡ ಸಂಕೀರ್ತನೆ ಯಾತ್ರೆ ಹೊಸಮನೆ ಮುಖ್ಯ ರಸ್ತೆ ಮೂಲಕ ಕೆಎಸ್‌ಆರ್‌ಟಿಸಿ ಘಟಕ ವೃತ್ತದವರೆಗೆ ಸಾಗಿ ನಂತರ ಶೃಂಗೇರಿ ಶಂಕರ ಮಠದ ರಸ್ತೆ ಮೂಲಕ ಬಸವೇಶ್ವರ ಸಭಾ ಭವನ ತಲುಪಲಿತು.
ನಂತರ ಸುಧೀರ್‌ಚೈತನ್ಯ ಪ್ರಭು ಅವರಿಂದ ಪ್ರವಚನ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವೈಭವ ಆರತಿ ಮತ್ತು ಕಾರ್ತಿಕ ದಾಮೋದರ ದೀಪೋತ್ಸವ ನಡೆಯಿತು. ಬಳಿಕ ಮಹಾಪ್ರಸಾದ ವಿತರಿಸಲಾಯಿತು.
ಪ್ರಮುಖರಾದ ರಸಿಕ್ ಚೈತನ್ಯದಾಸ್, ರಸರಾಜ್ ಗೋಪಾಲ್‌ದಾಸ್, ಛಲಪತ್ ಸಿಂಗ್, ನಾಗೇಗೌಡ, ಸಂತೃಷ್ಟ ಶ್ರೀವಲ್ಲಭ, ರವಿಕುಮಾರ್, ಶೇಖರ್ ಪ್ರಭು ಮತ್ತು ಕೃಷ್ಣಮೂರ್ತಿ ಹಾಗೂ ಮಹಿಳಾ ಭಕ್ತರು ಸೇರಿ ಇನ್ನಿತರರು ಸಂಕೀರ್ತನೆ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.