ADVERTISEMENT

ಮೈಲುತುತ್ತದಲ್ಲಿ ವಿಷ: ಕುಮುದ್ವತಿ ನದಿಯಲ್ಲಿ ಜಲಚರಗಳ ಸಾವು

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2023, 5:36 IST
Last Updated 30 ಮಾರ್ಚ್ 2023, 5:36 IST
ರಿಪ್ಪನ್‌ಪೇಟೆ ಬಿದರಹಳ್ಳಿ ಗ್ರಾಮದ ಕುಮದ್ವತಿ ನದಿಗೆ ಕಿಡಿಗೇಡಿಗಳು ವಿಷ ಹಾಕಿದ್ದು ಜಲಚರಗಳು ಸತ್ತಿರುವುದು
ರಿಪ್ಪನ್‌ಪೇಟೆ ಬಿದರಹಳ್ಳಿ ಗ್ರಾಮದ ಕುಮದ್ವತಿ ನದಿಗೆ ಕಿಡಿಗೇಡಿಗಳು ವಿಷ ಹಾಕಿದ್ದು ಜಲಚರಗಳು ಸತ್ತಿರುವುದು   

ರಿಪ್ಪನ್‌ಪೇಟೆ: ಸಮೀಪದ ಬಿದರಹಳ್ಳಿ ಗ್ರಾಮದ ಕುಮದ್ವತಿ ನದಿಗೆ ಕಿಡಿಗೇಡಿಗಳು ಮೈಲುತುತ್ತದಲ್ಲಿ ವಿಷ ಬೆರೆಸಿ ಹಾಕಿದ್ದು, ಜಲಚರಗಳು ಸಾವನ್ನಪ್ಪಿವೆ.

ಬೇಸಿಗೆ ಕಾರಣ ನದಿಯ ನೀರು ಇಂಗಿ ಹೋಗಿದ್ದು, ಅಲ್ಲಲ್ಲಿ ಕೆಲ ಹೊಂಡದಲ್ಲಿ ನಿಂತ ನೀರಿನಲ್ಲಿ ಜಲಚರಗಳು ಜೀವಿಸುತ್ತವೆ. ಇದನ್ನೇ ಬಂಡವಾಳ ಮಾಡಿಕೊಂಡ ಕಿಡಿಗೇಡಿಗಳು ಮೈಲುತುತ್ತ ಹಾಗೂ ಟಿಮೆಟ್ ಬೆರೆಸಿ ಜಲಚರಗಳ ನಾಶಕ್ಕೆ ಕಾರಣವಾಗಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.

ಮೀನು, ಕಪ್ಪೆ ಹಾಗೂ ಇನ್ನಿತರ ಜೀವಿಗಳು ನದಿಯ ದಂಡೆಯ ಮೇಲೆ ಸತ್ತು ಬಿದ್ದಿವೆ. ಆಹಾರ ಅರಸಿ ಬರುವ ಪಕ್ಷಿ ಸಂಕುಲಗಳು ಸಹ ಸತ್ತ ಪ್ರಾಣಿ ತಿಂದು ಸಾವನ್ನಪ್ಪುವ ಸಾಧ್ಯತೆ ಇದೆ. ಸುತ್ತಲಿನ ಜಾನುವಾರುಗಳು ಈ ನೀರನ್ನು ಕುಡಿದು ಅಸ್ವಸ್ಥಗೊಂಡಿವೆ. ಸುತ್ತಲಿನ ಪರಿಸರ ದುರ್ವಾಸನೆ ಬೀರುತ್ತಿದೆ ಎಂದು ಸ್ಥಳೀಯರಾದ‌ ದಿನೇಶ್ ಭಂಡಾರಿ ಹೇಳಿದರು.

ADVERTISEMENT

‘ತಪ್ಪಿತಸ್ಥ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಅಮೃತ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಧಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.