ADVERTISEMENT

ಹಲವೆಡೆ ಮುಂದುವರಿದ ಅನ್ನದ ನೆರವು

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2020, 12:36 IST
Last Updated 2 ಏಪ್ರಿಲ್ 2020, 12:36 IST
ಶಿವಮೊಗ್ಗದ ರಾಗಿಗುಡ್ಡದಲ್ಲಿ ಗುರುವಾರ ರಾಜೀವ್ ಗಾಂಧಿ ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎನ್‌.ರಮೇಶ್ ಜನರಿಗೆ ಮಾಸ್ಕ್‌ ವಿತರಿಸಿದರು.
ಶಿವಮೊಗ್ಗದ ರಾಗಿಗುಡ್ಡದಲ್ಲಿ ಗುರುವಾರ ರಾಜೀವ್ ಗಾಂಧಿ ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎನ್‌.ರಮೇಶ್ ಜನರಿಗೆ ಮಾಸ್ಕ್‌ ವಿತರಿಸಿದರು.   

ಶಿವಮೊಗ್ಗ: ಹಸಿದವರಿಗೆ ಅನ್ನ, ಆಹಾರ ಸಾಮಗ್ರಿ, ಮಾಸ್ಕ್‌, ಸ್ಯಾನಿಟೈಸರ್ ವಿತರಿಸುವಕಾರ್ಯಗುರುವಾರವೂಹಲವೆಡೆನಡೆಯಿತು.

ರಾಗಿ ಗುಡ್ಡದಲ್ಲಿ ರಾಜೀವ್ ಗಾಂಧಿ ಕಟ್ಟಡ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ, ಕಾರ್ಮಿಕ ಇಲಾಖೆಯ ಸಹಯೋಗದಲ್ಲಿ ಜನರಿಗೆಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಿದರು. ಸ್ವಚ್ಛತೆ, ಕೊರೊನಾ ತಡೆ ಕುರಿತು ಜಾಗೃತಿ ಮೂಡಿಸಲಾಯಿತು.

ಸಂಘದ ಅಧ್ಯಕ್ಷ ಎನ್.ರಮೇಶ್,ಮುಜೀಬ್ ಉಲ್ಲಾ, ತ೦ಗರಾಜ್ ಉಪಸ್ಥಿತರಿದ್ದರು

ADVERTISEMENT

ಹಕ್ಕಿಪಿಕ್ಕಿಗಳಿಗೆ ಆಹಾರದ ಕಿಟ್‌:ಶ್ರೀರಾಂಪುರ ಹಕ್ಕಿಪಿಕ್ಕಿ ಕ್ಯಾಂಪ್‌ನ 110 ಜನರಿಗೆ ತಹಶೀಲ್ದಾರ್ ಗಿರೀಶ್ಊಟದ ವ್ಯವಸ್ಥೆ ಮಾಡಿದರು.ಅಕ್ಕಿ, ಗೋಧಿ ಹಿಟ್ಟು, ಸಕ್ಕರೆ, ಬೇಳೆ, ಅಡುಗೆ ಎಣ್ಣೆ, ಉಪ್ಪು ಒಳಗೊಂಡ ಕಿಟ್‌ ವಿತರಿಸಿದರು.ಪೀಸ್ ಆರ್ಗನೈಜೇಶನ್ ಸಂಸ್ಥೆ, ದುರ್ಗಿಗುಡಿ ಅನ್ನಪೂರ್ಣೇಶ್ವರಿ ದೇವಸ್ಥಾನ ಸಮಿತಿ, ನ್ಯೂ ಹಾಟ್ ವ್ಹೀಲ್ಸ್ ಕ್ಲಬ್ ಸಹಯೋಗದಲ್ಲಿ ವಿತರಣೆ ನಡೆಯಿತು.

ಹಝ್ರತ್ ಖ್ವಾಜಾ ಗರೀಬ್ ನವಾಝ್ ಮಕಾನ್ ವತಿಯಿಂದಶಿವಮೊಗ್ಗದ ವಿವಿಧ ಬಡಾವಣೆಗಳಲ್ಲಿ ಊಟ ವಿತರಿಸಲಾಯಿತು.

ಕಾಲ್ನಡಿಗೆ ಕಾರ್ಮಿಕರಿಗೆ ನೆರವು: ಕುಂದಾಪುರಕ್ಕೆಕೆಲಸಕ್ಕೆ ಹೋಗಿದ್ದಶಿಕಾರಿಪುರ ತಾಲ್ಲೂಕುಗುಡ್ಡದ ಮಾದಾಪುರ ಗ್ರಾಮದಕೂಲಿ ಕಾರ್ಮಿಕರುಕಾಲ್ನಡಿಗೆಯಲ್ಲಿಊರಿಗೆ ಮರಳುತ್ತಿದ್ದಾರೆ. ಅವರಿಗೆ ಹೊಸನಗರ ತಾಲ್ಲೂಕಿನ ಕಚ್ಚಿಗೆ ಬೈಲಿನ ಶಹಾಬುದ್ಧೀನ್ ಮತ್ತು ಸ್ಥಳೀಯ ತಂಡ ಉಪಹಾರನೀಡುವ ಜತೆಗೆ,ಸ್ವಲ್ಪ ದೂರಕ್ಕೆ ಪ್ರಯಾಣಕ್ಕೆ ವಾಹನದವ್ಯವಸ್ಥೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.