ಆನವಟ್ಟಿ: ಸಮೀಪದ ಎಣ್ಣೆಕೊಪ್ಪ ಗೊಲ್ಲರ ತಾಂಡಾದಲ್ಲಿ ವ್ಯಕ್ತಿಯೊಬ್ಬರ ಮೇಲೆ ಚಿರತೆ ದಾಳಿ ಮಾಡಿದ್ದು, ಸಾಕುನಾಯಿಗಳು ಚಿರತೆಯನ್ನು ಓಡಿಸಿ ಪ್ರಾಣಾಪಾಯದಿಂದ ಪಾರುಮಾಡಿವೆ.
ಬಂಗಾರಪ್ಪ ಅವರು ಶನಿವಾರ ಬೆಳಿಗ್ಗೆ ಕಟ್ಟಿಗೆ ತರಲು ಕಾಡಿಗೆ ಹೋದಾಗ ಚಿರತೆ ದಾಳಿ ಮಾಡಿದ್ದು, ಕೈಗೆ ಗಾಯವಾಗಿದೆ. ಇದನ್ನು ಕಂಡ ಅವರ ಎರಡು ಸಾಕು ನಾಯಿಗಳು ತಕ್ಷಣಚಿರತೆ ಮೇಲೆ ಪ್ರತಿ ದಾಳಿ ಮಾಡಿ ಚಿರತೆಯನ್ನು ಓಡಿಸಿವೆ. ಬಂಗಾರಪ್ಪ ಅವರನ್ನು ಶಿಕಾರಿಪುರದಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.