ADVERTISEMENT

ಪಂಚಾಯಿತಿಗಳ ಚುನಾವಣೆಗೆ ಸಿದ್ಧ: ಸಚಿವ ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 27 ಮೇ 2020, 14:06 IST
Last Updated 27 ಮೇ 2020, 14:06 IST

ಶಿವಮೊಗ್ಗ: ಚುನಾವಣಾ ಆಯೋಗ ಸೂಚಿಸಿದರೆ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಸರ್ಕಾರ ಸಿದ್ಧ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಶಿವಮೊಗ್ಗ ಪ್ರೆಸ್‌ಟ್ರಸ್ಟ್ ಬುಧವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾಹಿತಿ ನೀಡಿದರು.

ರಾಜ್ಯದ 6ಸಾವಿರಕ್ಕೂ ಹೆಚ್ಚುಗ್ರಾಮ ಪಂಚಾಯಿತಿಗಳ ಅವಧಿ ಜೂನ್‌, ಜುಲೈಗೆ ಮುಗಿಯುತ್ತವೆ. ಕೊರೊನಾ ಸಂಕಷ್ಟದ ಈ ಸಮಯದಲ್ಲಿ ಚುನಾವಣೆ ನಡೆಸುವ ಕುರಿತು ರಾಜ್ಯ ಚುನಾವಣಾ ಆಯೋಗ ಜಿಲ್ಲಾಧಿಕಾರಿಗಳಿಗೆ ಪತ್ರೆ ಬರೆದುಮಾಹಿತಿ ಕೇಳಿದೆ. ಅವರ ಮಾಹಿತಿ ಆಧಾರಿಸಿ ಚುನಾವಣೆ ನಡೆಸಲು ಆದೇಶಿಸಿದರೆ ಸರ್ಕಾರ ಸಿದ್ಧವಿದೆ. ಒಂದು ವೇಳೆಚುನಾವಣೆ ಮುಂದೂಡಿದರೆಸಂಪುಟ ಸಭೆಯಲ್ಲಿ ಚರ್ಚಿಸಿ, ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ADVERTISEMENT

ಚುನಾವಣೆ ಮುಂದೂಡಿದರೆ ಈಗಿರುವಚುನಾಯಿತ ಸದಸ್ಯರ ಅವಧಿ ಆರು ತಿಂಗಳು ಮುಂದುವರಿಸಬಹುದು. ಆಡಳಿತಾಧಿಕಾರಿಗಳನ್ನುನೇಮಿಸಬಹುದು. ಇಲ್ಲವೇ, ಚುನಾಯಿತ ಸದಸ್ಯರ ಮಾದರಿಯಲ್ಲಿ ನಾಮನಿರ್ದೇಶಿತ ಆಡಳಿತ ಸಮಿತಿ ರಚಿಸಬಹುದು. ಯಾವ ಆಯ್ಕೆ ಸೂಕ್ತ ಎನ್ನುವ ಕುರಿತು ಸಂಪುಟ ಸಭೆಯ ಬಳಿಕ ಪ್ರಕಟಿಸಲಾಗುವುದು ಎಂದು ವಿವರ ನೀಡಿದರು.

ನಾಮನಿರ್ದೇಶಿತ ಸಮಿತಿ ರಚಿಸುವಂತೆ ಯಾರ ಒತ್ತಡವೂ ಇಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಟೀಕಿಸುವ ನೈತಿಕತೆ ಇಲ್ಲ. ಹಿಂದೆ ನಗರಸಭೆ ಚುನಾಯಿತ ಪ್ರತಿನಿಧಿಗಳ ಅಧಿಕಾರ ರದ್ದು ಮಾಡಿ, ಪಕ್ಷದ ಕಾರ್ಯಕರ್ತರಿಗೆ ಅಧಿಕಾರದ ಬಳುವಳಿ ನೀಡುವ ಮೂಲಕ ಅವರು ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸಿದ್ದರು. ಈಗ ಟೀಕಿಸುವುದರಲ್ಲಿ ಅರ್ಥವಿಲ್ಲ ಎಂದು ಕುಟುಕಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.