ADVERTISEMENT

ಕೋವಿಡ್ ಪೀಡಿತರ‌ ಶವ ಸಂಸ್ಕಾರಕ್ಕೆ ನಿಯೋಜನೆಗೊಂಡಿದ್ದ ನೌಕರ ಕೋವಿಡ್‌ನಿಂದಲೇ ಸಾವು

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2020, 14:24 IST
Last Updated 14 ಸೆಪ್ಟೆಂಬರ್ 2020, 14:24 IST
ಕೋವಿಡ್‌ ನಿಂದ ಮೃತಪಟ್ಟ ವ್ಯಕ್ತಿಯೊಬ್ಬರ ಶವದ ಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿರುವ ಆರೋಗ್ಯ ಕಾರ್ಯಕರ್ತರು
ಕೋವಿಡ್‌ ನಿಂದ ಮೃತಪಟ್ಟ ವ್ಯಕ್ತಿಯೊಬ್ಬರ ಶವದ ಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿರುವ ಆರೋಗ್ಯ ಕಾರ್ಯಕರ್ತರು    

ಶಿವಮೊಗ್ಗ: ಕೋವಿಡ್‌ನಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೆ ನಗರ ಪಾಲಿಕೆ ನಿಯೋಜಿಸಿದ್ದ ಹೊರಗುತ್ತಿಗೆ ನೌಕರ ಪಾಪಾನಾಯ್ಕ (35) ಅವರು ಕೋವಿಡ್‌ನಿಂದಲೇ ಸೋಮವಾರ ಜೀವ ಕಳೆದುಕೊಂಡಿದ್ದಾರೆ.

ನಗರದ ರೋಟರಿ ಚಿತಾಗಾರದಲ್ಲಿ ಕೋವಿಡ್ ಸೋಂಕಿತರ ಶವ ದಹಿಸಲು ಮೂವರು ಸಿಬ್ಬಂದಿ ನಿಯೋಜಿಸಲಾಗಿತ್ತು. ಶಂಕರನಿಗೆ ಸಹಾಯಕನಾಗಿ ಪಾಪಾನಾಯ್ಕ ಕೆಲಸ ಮಾಡುತ್ತಿದ್ದರು. ಪಾಲಿಕೆಯಲ್ಲಿ ಕೆಲಸ ಮಾಡುತ್ತಿದ್ದ ಅವರನ್ನು ಕೋವಿಡ್ ಆರಂಭವಾದ ನಂತರ ಶವಾಗಾರಕ್ಕೆ ನಿಯೋಜಿಸಲಾಗಿತ್ತು.

ನಿತ್ಯವೂ ಶವಸಂಸ್ಕಾರ ಕಾರ್ಯ ನಿರ್ವಹಿಸುತ್ತಿದ್ದ ಅವರು ಸೆ.8ರಂದು ತೀವ್ರ ಉಸಿರಾಟದ ಸಮಸ್ಯೆಗೆ ಒಳಗಾಗಿದ್ದರು. ಮೆಗ್ಗಾನ್ ಕೋವಿಡ್‌ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ.

ADVERTISEMENT

ಹೊಳೆಬೆನವಳ್ಳಿ ಹೊಸಮನೆ ತಾಂಡಾದ ಅವರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.