ADVERTISEMENT

ಸಂವಿಧಾನದಡಿ ಕೆಲಸ ಪ್ರತಿಯೊಬ್ಬರ ಕರ್ತವ್ಯ: ನ್ಯಾಯಾಧೀಶರಾದ ಅರ್.ವೈ. ಶಶಿಧರ್

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 8:14 IST
Last Updated 28 ನವೆಂಬರ್ 2021, 8:14 IST
ಭದ್ರಾವತಿ ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಾದ ಆರ್.ವೈ. ಶಶಿಧರ್ ಉದ್ಘಾಟಿಸಿದರು.
ಭದ್ರಾವತಿ ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಾದ ಆರ್.ವೈ. ಶಶಿಧರ್ ಉದ್ಘಾಟಿಸಿದರು.   

ಭದ್ರಾವತಿ: ‘ರಾಷ್ಟ್ರದ ಎಲ್ಲಾ ಕಾನೂನುಗಳು ಸಂವಿಧಾನದ ಆಶಯದ ಈಡೇರಿಕೆಗೆ ಪೂರಕವಾಗಿ ರಚಿತವಾಗಿದ್ದು, ಅವುಗಳನ್ನು ಪ್ರತಿಯೊಬ್ಬನೂ ಕರ್ತವ್ಯದ ರೀತಿಯಲ್ಲಿ ಪಾಲಿಸಬೇಕು’ ಎಂದು ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಅರ್.ವೈ. ಶಶಿಧರ್ ಹೇಳಿದರು.

ನ್ಯಾಯಾಲಯ ಆವರಣದಲ್ಲಿ ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ವಕೀಲರ ಸಂಘ ಸಂಯುಕ್ತವಾಗಿ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂವಿಧಾನ ನೀಡಿರುವ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿತು ಅದರ ಪಾಲನೆ ಮಾಡುವುದು ಪ್ರ್ರತಿಯೊಬ್ಬನ ಜವಾಬ್ದಾರಿ. ದೇಶದ ನಾಗರಿಕರಿಗೆ ಸಂವಿಧಾನ ದತ್ತವಾದ ಯಾವುದೇ ಹಕ್ಕುಗಳಿಗೆ ಚ್ಯುತಿಯಾದಲ್ಲಿ ನ್ಯಾಯ ಪಡೆಯಲು ನ್ಯಾಯಾಲಯ ಮೊರೆ ಹೋಗುತ್ತಾರೆ. ಇದರ ನಿರ್ವಹಣೆಯನ್ನು ನ್ಯಾಯಾಂಗ ಮಾಡುತ್ತಾ ಬಂದಿದೆ ಎಂದರು.

ADVERTISEMENT

ವೇದಿಕೆಯಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ, ನ್ಯಾಯಾಧೀಶರಾದ ಉಜ್ವಲ ರೇವಣ್ಣ ಸಿದ್ದಣ್ಣನವರ್, ನ್ಯಾಯಾಧೀಶರಾದ ಮಿಲನ, ಪುರುಷೋತ್ತಮ್ ಚಂದ್ರಶೇಖರ ಬಣಕಾರ್, ಸ್ನೇಹ, ವಕೀಲರ ಸಂಘದ ಉಪಾಧ್ಯಕ್ಷ ಡಿ.ಎಂ. ವಿಶ್ವನಾಥ್, ಕಾರ್ಯದರ್ಶಿ ಉದಯಕುಮಾರ್, ಖಜಾಂಚಿ ವಿಮಲ ಸಹ ಕಾರ್ಯದರ್ಶಿ ಮಂಜಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.