ADVERTISEMENT

ಶಿವಮೊಗ್ಗ | ಮೆಗ್ಗಾನ್ ಆಸ್ಪತ್ರೆಯ ಶೌಚಾಲಯದ ಹಿಂದೆ ಹೆಣ್ಣು ಭ್ರೂಣ ಪತ್ತೆ

-

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2024, 15:37 IST
Last Updated 26 ಡಿಸೆಂಬರ್ 2024, 15:37 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಶಿವಮೊಗ್ಗ: ಇಲ್ಲಿನ ಮೆಗ್ಗಾನ್ ಆಸ್ಪತ್ರೆಯ ಮಹಿಳೆಯರ ಶೌಚಗೃಹದ ಕಿಟಕಿಯ ಹಿಂಭಾಗ ಬಿಸಾಕಿದ್ದ ಆರು ತಿಂಗಳ ಹೆಣ್ಣು ಮಗುವಿನ ಭ್ರೂಣ ಗುರುವಾರ ಪತ್ತೆಯಾಗಿದೆ.

ಹೊಟ್ಟೆ ನೋವು ಎಂದು ಶಿವಮೊಗ್ಗದ ವಿಳಾಸ ನೀಡಿ ಬುಧವಾರ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ರಾತ್ರಿ ಶೌಚಾಲಯಕ್ಕೆ ತೆರಳಿ ಬ್ಯಾಗ್‌ನಲ್ಲಿ ಇಟ್ಟುಕೊಂಡು ಬಂದಿದ್ದ ಭ್ರೂಣವನ್ನು ಕಿಟಕಿಯಿಂದ ಆಚೆ ಎಸೆದಿದ್ದಾರೆ. ನಂತರ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿದ್ದ ಕೇಸ್ ಶೀಟ್ ತೆಗೆದುಕೊಂಡು ಮನೆಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ADVERTISEMENT

ಭ್ರೂಣ ಪತ್ತೆಯಾದ ನಂತರ ಸಿಸಿ ಟಿವಿ ದೃಶ್ಯಾವಳಿ ಪರಿಶೀಲಿಸಿದ್ದು, ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೇ ಭ್ರೂಣ ಕಿಟಕಿಯಿಂದ ಆಚೆಗೆ ಎಸೆದಿರುವುದು ಗೊತ್ತಾಗಿದೆ. ನಂತರ ಆಸ್ಪತ್ರೆ ಆಡಳಿತ ದೊಡ್ಡಪೇಟೆ ಠಾಣೆ ಪೊಲೀಸರಿಗೆ ದೂರು ನೀಡಿದೆ. ‍ಪೊಲೀಸರು ಮಹಿಳೆಯನ್ನು ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ.

‘ಮಗು ಮಾಡಿಕೊಳ್ಳುವ ವಿಚಾರದಲ್ಲಿ ಪತಿಯೊಂದಗೆ ಜಗಳ ಆಗಿದ್ದು, ಅವರು ಗರ್ಭಪಾತಕ್ಕಾಗಿ ಗುಳಿಗೆ ಕೊಟ್ಟಿದ್ದರು. ಹೀಗಾಗಿ ಅವಧಿಗೆ ಮುನ್ನ ಗರ್ಭಪಾತವಾಗಿತ್ತು. ಹೊಟ್ಟೆ ನೋವಿನ ನೆಪದಲ್ಲಿ ಆಸ್ಪತ್ರೆಗೆ ಬಂದು ಭ್ರೂಣ ಇಲ್ಲಿ ಹಾಕಿ ಹೋಗಿದ್ದೇನೆ ಎಂದು ವಿಚಾರಣೆ ವೇಳೆ ಮಹಿಳೆ ಹೇಳಿಕೆ ನೀಡಿದ್ದಾರೆ’ ಎಂಬುದಾಗಿ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ.ಸಿದ್ಧನಗೌಡ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.