ADVERTISEMENT

ಅರಣ್ಯ ಕಾವಲುಗಾರರ ಮೇಲೆ ಗುಂಡು

​ಪ್ರಜಾವಾಣಿ ವಾರ್ತೆ
Published 25 ಮೇ 2020, 20:07 IST
Last Updated 25 ಮೇ 2020, 20:07 IST
ಸಾಗರ ತಾಲ್ಲೂಕಿನ ಕಟ್ಟಿನಕಾರು ಗ್ರಾಮದ ಶರಾವತಿ ಅಭಯಾರಣ್ಯ ಪ್ರದೇಶದಲ್ಲಿ ಭಾನುವಾರ ರಾತ್ರಿ ಅರಣ್ಯ ಕಾವಲುಗಾರರು ವಶಪಡಿಸಿಕೊಂಡಿರುವ ನಾಡ ಬಂದೂಕು ಹಾಗೂ ಬೇಟೆಯಾಡಿರುವ ಹಾರು ಬೆಕ್ಕುಗಳು.
ಸಾಗರ ತಾಲ್ಲೂಕಿನ ಕಟ್ಟಿನಕಾರು ಗ್ರಾಮದ ಶರಾವತಿ ಅಭಯಾರಣ್ಯ ಪ್ರದೇಶದಲ್ಲಿ ಭಾನುವಾರ ರಾತ್ರಿ ಅರಣ್ಯ ಕಾವಲುಗಾರರು ವಶಪಡಿಸಿಕೊಂಡಿರುವ ನಾಡ ಬಂದೂಕು ಹಾಗೂ ಬೇಟೆಯಾಡಿರುವ ಹಾರು ಬೆಕ್ಕುಗಳು.   

ಸಾಗರ: ತಾಲ್ಲೂಕಿನ ಕಟ್ಟಿನಕಾರು ಗ್ರಾಮದ ಶರಾವತಿ ಅಭಯಾರಣ್ಯ ಪ್ರದೇಶದಲ್ಲಿ ಅರಣ್ಯ ಕಾವಲುಗಾರರ ಮೇಲೆ ಬೇಟೆಗಾರರು ಗುಂಡು ಹಾರಿಸಿ ಪರಾರಿಯಾಗಿರುವ ಪ್ರಕರಣ ಭಾನುವಾರ ತಡರಾತ್ರಿ ನಡೆದಿದೆ.

ಶರಾವತಿ ಕೊಳ್ಳದ ಭಾಗದಲ್ಲಿ ಕಾವಲುಗಾರರು ಗಸ್ತು ತಿರುಗುತ್ತಿದ್ದಾಗ ಕೆಲವರು ಅಲ್ಲಿ ಬೇಟೆ ಆಡುತ್ತಿದ್ದುದು ಗಮನಕ್ಕೆ ಬಂದಿದೆ. ಹಿಡಿಯಲು ಮುಂದಾದ ಕಾವಲುಗಾರರ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಪ್ರತಿ
ಯಾಗಿ ಕಾವಲುಗಾರರೂ ಗುಂಡಿನ ದಾಳಿ ನಡೆಸಿದ್ದಾರೆ.

ಎರಡು ನಾಡ ಬಂದೂಕುಗಳು ಹಾಗೂ ಬೇಟೆಯಾಡಿದ್ದ ಎರಡು ಹಾರು ಬೆಕ್ಕುಗಳನ್ನು ಸ್ಥಳದಲ್ಲೇ ಬಿಟ್ಟು ಬೇಟೆಗಾರರು ಪರಾರಿಯಾಗಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.