ADVERTISEMENT

‘ಅನ್ವೇಷಣೆ ಇಲ್ಲದ ಸಂಸ್ಥೆಗಳಿಗೆ ಮಾರುಕಟ್ಟೆಯಲ್ಲಿ ಅಸ್ತಿತ್ವವಿಲ್ಲ’

ಕ್ಯಾಪಿಟಲ್ ಮಾರ್ಕೆಟ್ ಕುರಿತ ಕಾರ್ಯಾಗಾರದಲ್ಲಿ ರೆಹಮತ್ ಬೇಗ್

​ಪ್ರಜಾವಾಣಿ ವಾರ್ತೆ
Published 5 ಮೇ 2022, 2:40 IST
Last Updated 5 ಮೇ 2022, 2:40 IST
ಕುವೆಂಪು ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಬೆಂಗಳೂರಿನ ಆನಂದ್ ರಾಠಿ ಸಂಸ್ಥೆಯ ವ್ಯವಸ್ಥಾಪಕ ರೆಹಮತ್ ಬೇಗ್ ಮಾತನಾಡಿದರು.
ಕುವೆಂಪು ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಬೆಂಗಳೂರಿನ ಆನಂದ್ ರಾಠಿ ಸಂಸ್ಥೆಯ ವ್ಯವಸ್ಥಾಪಕ ರೆಹಮತ್ ಬೇಗ್ ಮಾತನಾಡಿದರು.   

ಶಿವಮೊಗ್ಗ: ಕಾರ್ಪೊರೆಟ್ ಸಂಸ್ಥೆಗಳು ಹೊಸ ಅನ್ವೇಷಣೆಗಳು ಮತ್ತು ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಕಾಲಕಾಲಕ್ಕೆ ಪರಿಚಯಿಸುತ್ತಿರಬೇಕು. ಇಲ್ಲವಾದರೆ ಜಾಗತಿಕ ಮಾರುಕಟ್ಟೆಯಲ್ಲಿ ಅವುಗಳು ತಮ್ಮ ಅಸ್ತಿತ್ವ ಕಳೆದುಕೊಳ್ಳುತ್ತವೆ ಎಂದುಬೆಂಗಳೂರಿನ ಆನಂದ್ ರಾಠಿ ಸಂಸ್ಥೆಯ ವ್ಯವಸ್ಥಾಪಕ ರೆಹಮತ್ ಬೇಗ್ ಅಭಿಪ್ರಾಯಪಟ್ಟರು.

ಕುವೆಂಪು ವಿಶ್ವವಿದ್ಯಾಲಯದ ನಿರ್ವಹಣಾಶಾಸ್ತ್ರ ವಿಭಾಗವು ಬುಧವಾರ ಪ್ರೊ. ಎಸ್. ಪಿ. ಹಿರೇಮಠ್ ಸಭಾಂಗಣದಲ್ಲಿ ‘ಕ್ಯಾಪಿಟಲ್ ಮಾರ್ಕೆಟ್ ಡೈನಾಮಿಕ್ಸ್ ಮತ್ತು ಅವಕಾಶಗಳು’ ಕುರಿತು ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಬಿಎಸ್‌ಇ ಮತ್ತು ಎನ್‌ಎಸ್‌ಇ ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುವಾಗ ಪ್ರಸಕ್ತ ವಿದ್ಯಮಾನಗಳು ಮತ್ತು ಜಾಗತಿಕ ಬೆಳವಣಿಗೆಗಳು ಸಂಸ್ಥೆಗಳ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ಅರಿತು ಹೂಡಿಕೆದಾರರು ಮುಂದಡಿಯಿಡಬೇಕು ಎಂದರು.

ADVERTISEMENT

ಇದೇ ಸಂದರ್ಭದಲ್ಲಿ ಆನಂದ್ ರಾಠಿ ಸಂಸ್ಥೆಯಿಂದ ಮೌಖಿಕ ಪರೀಕ್ಷೆ ನಡೆಸಿ ವಿಭಾಗದ ಕೆಲವು ವಿದ್ಯಾರ್ಥಿಗಳನ್ನು ಸಂಸ್ಥೆಯ ಮುಂದಿನ ಉದ್ಯೋಗ ಪ್ರಕ್ರಿಯೆಗೆ ಆಯ್ಕೆ ಮಾಡಿಕೊಳ್ಳಲಾಯಿತು.

ವಿಭಾಗದ ಅಧ್ಯಕ್ಷ ಪ್ರೊ. ಎಚ್. ಎನ್. ರಮೇಶ್, ಪ್ರೊ. ಹಿರೇಮಣ ನಾಯಕ್, ಡಾ.ಕೆ.ಆರ್. ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.