ADVERTISEMENT

ಹೊಸನಗರ: ನಾಳೆಯಿಂದ ಆದಿವಾಸಿಗಳ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2019, 10:48 IST
Last Updated 19 ಡಿಸೆಂಬರ್ 2019, 10:48 IST

ಶಿವಮೊಗ್ಗ: ಹೊಸನಗರದಲ್ಲಿಡಿ.21 ಮತ್ತು 22ರಂದು ರಾಜ್ಯಮಟ್ಟದ ಆದಿವಾಸಿಗಳ ಮೂರನೇ ಸಮ್ಮೇಳನ ಮತ್ತುಸಾಂಸ್ಕೃತಿಕಸಮ್ಮಿಲನ ಕಾರ್ಯಕ್ರಮ ಆಯೋಜಿಸಲಾಗಿದೆ.

21ರಂದು ಬೆಳಿಗ್ಗೆ 10.30ಕ್ಕೆ ಹೊಸನಗರದ ಮಾವಿನಕೊಪ್ಪದಿಂದ ಆಕರ್ಷಕ ಮೆರವಣಿಗೆಆಯೋಜಿಸಲಾಗಿದೆ. ನಂತರ ವಿದ್ಯಾಕಲಾ ಮಂದಿರದಲ್ಲಿ ಸಮ್ಮೇಳನ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಬುಡಕಟ್ಟು ಜಾನಪದ ಕಲಾವಿದ ಎಂ.ಎಲ್ಲಪ್ಪ ನಣಬೂರು ಸಮ್ಮೇಳನ ಉದ್ಘಾಟಿಸುವರು.ಆದಿವಾಸಿ ಅಧಿಕಾರ್ ರಾಷ್ಟ್ರೀಯ ಮಂಚ್‍ನ ಸಂಚಾಲಕ ಜಿತೇಂದ್ರ ಚೌದರಿ ದಿಕ್ಸೂಚಿ ಭಾಷಣ ಮಾಡುವರು. ಜಾನಪದ ಅಕಾಡೆಮಿ ಸದಸ್ಯೆ ಜೂಲಿಯಾನ ಫೆರ್ನಾಂಡಿಸ್‌ಸಿದ್ದಿ,ಪತ್ರಕರ್ತ ನಿತ್ಯಾನಂದ ಸ್ವಾಮಿ, ಸಮ್ಮೇಳನದ ಸ್ವಾಗತ ಸಮಿತಿ ಗೌರವಾಧ್ಯಕ್ಷ ಹೆಗ್ಗೋಡು ಪ್ರಸನ್ನ ಭಾಗವಹಿಸುವರು ಎಂದು ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹ ಸಂಚಾಲಕ ಎಸ್.ವೈ.ಗುರುಶಾಂತ್ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಅಂದು ಸಂಜೆ 5ಕ್ಕೆ ಜನಪದ ಕಲಾವಿದ ಮಹಾದೇವ ವೆಳಿಪ ಆದಿವಾಸಿಗಳ ಸಾಂಸ್ಕೃತಿಕ ಸಮ್ಮಿಲನ ಉದ್ಘಾಟಿಸುವರು.ಶಾಸಕರಾದ ಹರತಾಳು ಹಾಲಪ್ಪ, ಆರಗ ಜ್ಞಾನೇಂದ್ರ ಭಾಗವಹಿಸುವರು.22ರಂದು ಸಂಜೆ ಸಮಾರೋಪದಲ್ಲಿ ಸಾಹಿತಿ ನಾ.ಡಿಸೋಜ, ಮಾಜಿ ಸಚಿವ ಕಾಗೋಡು ತಿಮ್ಮಪ್ಪಉಪಸ್ಥಿತರಿರುವರು.ಸಮ್ಮೇಳನದಲ್ಲಿ ಆದಿವಾಸಿಗಳ ಸಾಂಸ್ಕೃತಿಕ ಮುನ್ನೋಟ, ಅವರ ನಿಜ ಬದುಕಿನ ಅನಾವರಣ, ಅಸ್ತಿತ್ವದ ಹುಡುಕಾಟ, ಭವಿಷ್ಯದ ಚಿಂತನೆ, ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು, ಒಕ್ಕಲೆಬ್ಬಿಸುವುದನ್ನು ತಡೆಗಟ್ಟುವುದು, ಮೂಲಸೌಕರ್ಯ ನೀಡುವಂತೆ ಒತ್ತಾಯಿಸಲಾಗುವುದು ಎಂದರು.

ADVERTISEMENT

ಜಿಲ್ಲೆಯಲ್ಲಿ ಹಸಲರು, ಗೊಂಡಾ, ಕುಣಬಿ, ಮರಾಠಿ ನಾಯ್ಕ, ಮೇಧ, ಸಿಳ್ಳೆಕ್ಯಾತರು, ಕೊರಗ, ಹಕ್ಕಿಪಿಕ್ಕಿ, ಇರುಳಾರ್, ಸೋಲಿಗರು, ಗೌಳಿ ಸೇರಿದಂತೆ ಹಲವು ಮೂಲ ಆದಿವಾಸಿಗಳು ಇದ್ದಾರೆ. ಈ ಎಲ್ಲ ಸಮುದಾಯಗಳು ಶರಾವತಿ, ವರಾಹಿ, ಚಕ್ರ, ಸಾವೆಹಕ್ಲು ಮುಂತಾದ ಯೋಜನೆಗಳಿಂದ ತಮ್ಮ ಮೂಲ ನೆಲೆಯನ್ನೇ ಕಳೆದುಕೊಂಡಿದ್ದಾರೆ. ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣಕ್ಕೆದುಡಿದಿದ್ದಾರೆ. ಹಲವರುಸುರಂಗ ನಿರ್ಮಾಣದ ವೇಳೆ ಮೃತಪಟ್ಟಿದ್ದಾರೆ ಎಂದು ಅಳಲು ತೋಡಿಕೊಂಡರು.

ದೇಶದಲ್ಲಿ ಸುಮಾರು 550 ಬುಡಕಟ್ಟು ಸಮುದಾಯಗಳಿವೆ. ರಾಜ್ಯದಲ್ಲೇ58ಕ್ಕೂ ಹೆಚ್ಚು ಸಮುದಾಯಗಳು ನೆಲೆಸಿವೆ. ದಟ್ಟ ಕಾನನಗಳ ನಡುವೆ ತಮ್ಮದೇ ಬದುಕು ಕಟ್ಟಿಕೊಂಡಿದ್ದಾರೆ.ಆಧುನಿಕತೆಯಬಿರುಗಾಳಿಯ ಮಧ್ಯೆ ಅವರುತಮ್ಮ ಆಸ್ಮಿತೆ ಉಳಿಸಿಕೊಳ್ಳುವುದೇಸವಾಲಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಆದಿವಾಸಿಗಳು ಅರಣ್ಯ ಉಳಿಸುವವರೇ ಹೊರತು ಅಳಿಸುವವರಲ್ಲ. ಪ್ರಾಣಿಗಳ ಮಧ್ಯೆ ಬೆಳೆದು, ಗಿಡ ಮರಗಳನ್ನು ರಕ್ಷಿಸಿದ್ದಾರೆ. ಖಾಲಿ ಜಾಗಗಳಲ್ಲಿ ವ್ಯವಸಾಯ ಮಾಡಿಕೊಂಡು ಬದುಕುತ್ತಿದ್ದಾರೆ. ಶತಮಾನಗಳಿಂದ ಆರಣ್ಯದಲ್ಲಿಯೇ ಬದುಕುವ ಅವರಿಗೆ ಯಾರು ಸೌಲಭ್ಯಗಳೂ ಸಿಕ್ಕಿಲ್ಲ. ಹಕ್ಕುಪತ್ರ ಕೊಟ್ಟಿಲ್ಲ. ಈಗಿನಅರಣ್ಯ ನೀತಿಗಳು, ರಾಷ್ಟ್ರೀಯ ನೀತಿಗಳು, ಅಭಿವೃದ್ಧಿ ಕಾರಣಗಳಿಂದಅವರನ್ನು ಒಕ್ಕಲೆಬ್ಬಿಸಲಾಗುತ್ತಿದೆ.ದಿಕ್ಕುತಪ್ಪಿಸಲಾಗುತ್ತಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸ್ವಾಗತ ಸಮಿತಿ ಉಪಾಧ್ಯಕ್ಷ ಜಿ.ಎಸ್.ನಾಗರಾಜ್, ಪ್ರಮುಖರಾದ ಸುರೇಶ್ ಕುಂಬಳೆ, ನಾರಾಯಣ, ಕೆ.ಪ್ರಭಾಕರನ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.