ADVERTISEMENT

ಸಾಗರ: ಗಣಪತಿ ಕೆರೆ ಒತ್ತುವರಿ ತನಿಖೆಗೆ ಹೈಕೋರ್ಟ್ ನಿರ್ದೇಶನ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2020, 14:36 IST
Last Updated 7 ಅಕ್ಟೋಬರ್ 2020, 14:36 IST
ಸಾಗರ ನಗರದ ಹೃದಯ ಭಾಗದಲ್ಲಿರುವ ಗಣಪತಿ ಕೆರೆ (ಸಂಗ್ರಹ ಚಿತ್ರ)
ಸಾಗರ ನಗರದ ಹೃದಯ ಭಾಗದಲ್ಲಿರುವ ಗಣಪತಿ ಕೆರೆ (ಸಂಗ್ರಹ ಚಿತ್ರ)   

ಸಾಗರ: ನಗರದ ಹೃದಯ ಭಾಗದಲ್ಲಿರುವ ಗಣಪತಿ ಕೆರೆಯನ್ನು ಒತ್ತುವರಿ ಮಾಡಲಾಗಿದೆ ಎಂಬ ದೂರಿನ ಕಾರಣಸ್ಥಳ ತನಿಖೆ ನಡೆಸಿ ನ.11ರಂದು ವರದಿ ಸಲ್ಲಿಸುವಂತೆ ತಹಶೀಲ್ದಾರ್‌ ಅವರಿಗೆ ಹೈಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ.

ಇಲ್ಲಿನ ಎಸ್.ಎನ್.ನಗರ ಬಡಾವಣೆಯ ಟಿ.ಮಹೇಶ್, ಮಾರ್ಕೆಟ್ ರಸ್ತೆಯ ಕಿರಣ್ ಗೌಡ ಎಂಬುವವರು ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಹಾಗೂ ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರಿದ್ದ ಪೀಠ ಈ ನಿರ್ದೇಶನ ನೀಡಿದೆ.

ಸರ್ಕಾರಿ ಸರ್ವೆಯರ್‌ಗಳ ಸಹಾಯದಿಂದ ಸರ್ವೆ ನಡೆಸಿ ಕೆರೆಗೆ ಸಂಬಂಧಪಟ್ಟ ಕಂದಾಯ ದಾಖಲೆಗಳಲ್ಲಿ ಇರುವ ವಿಸ್ತೀರ್ಣ ಹಾಗೂ ಸ್ಥಳದಲ್ಲಿರುವ ಕೆರೆಯ ವಿಸ್ತೀರ್ಣ ಎಷ್ಟು, ಒಂದು ವೇಳೆ ಕೆರೆ ಒತ್ತುವರಿಯಾಗಿದ್ದರೆ ಒತ್ತುವರಿಯ ವಿಸ್ತೀರ್ಣವೆಷ್ಟು ಎನ್ನುವ ಬಗ್ಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ತಹಶೀಲ್ದಾರ್‌ ಅವರಿಗೆ ಸೂಚಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.