ADVERTISEMENT

ಅಲೆಮಾರಿಗಳ ಪ್ರತ್ಯೇಕ ಸಮೀಕ್ಷೆ ನಡೆಸಿ: ಜಿ.ಪಲ್ಲವಿ ಆಗ್ರಹ

-

​ಪ್ರಜಾವಾಣಿ ವಾರ್ತೆ
Published 8 ಮೇ 2025, 15:50 IST
Last Updated 8 ಮೇ 2025, 15:50 IST
ಜಿ.ಪಲ್ಲವಿ
ಜಿ.ಪಲ್ಲವಿ   

ಶಿವಮೊಗ್ಗ: ‘ಅವಕಾಶ ವಂಚಿತ ಅಲೆಮಾರಿ ಸಮುದಾಯಗಳ ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿ ತಿಳಿಯಲು ಹೋಬಳಿ ಮಟ್ಟದಲ್ಲಿ ವಿಶೇಷ ಸಮೀಕ್ಷೆ ನಡೆಸಬೇಕು’ ಎಂದು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ.ಪಲ್ಲವಿ ಒತ್ತಾಯಿಸಿದರು.

ಪರಿಶಿಷ್ಟ ಜಾತಿಯವರಿಗೆ ಒಳಮೀಸಲಾತಿ ಹಂಚಿಕೆಗೆ ದತ್ತಾಂಶ ಸಂಗ್ರಹಿಸುವಾಗಲೇ ಅಲೆಮಾರಿಗಳ ಸ್ಥಿತಿಗತಿ ಸಮೀಕ್ಷೆ ಮಾಡಬಹುದಿತ್ತು. ಪ್ರಶ್ನಾವಳಿ ಪಟ್ಟಿ ಬೇರೆಯೇ ಆಗಬೇಕಿದೆ. ಪ್ರತ್ಯೇಕವಾಗಿ ಮೂರು ದಿನ ನಡೆಸಲಿ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

‘ಅಲೆಮಾರಿಗಳಲ್ಲಿ ಸಿಂಧೋಳು ಹಾಗೂ ದುರುಗಮುರುಗಿ ಎರಡೂ ಹೆಸರು ಒಂದೇ ಸಮುದಾಯಕ್ಕೆ ಸಂಬಂಧಿಸಿದೆ. ಜಾತಿ ಮತ್ತು ವೃತ್ತಿಯ ಹೆಸರಿನ ಕಾರಣಕ್ಕೆ ಪರಿಶಿಷ್ಟ ಜಾತಿ, ಪ್ರವರ್ಗ– 1 ಎರಡರಲ್ಲೂ ದಾಖಲಾಗಿದ್ದಾರೆ. ಇಂತಹ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಮೀಸಲಾತಿ ಸಮಾನ ಹಂಚಿಕೆಗಾಗಿ ಸಮೀಕ್ಷೆ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.