ADVERTISEMENT

ಪದವೀಧರರ ಸಂಘಕ್ಕೆ ಸುವರ್ಣ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2020, 11:02 IST
Last Updated 28 ಸೆಪ್ಟೆಂಬರ್ 2020, 11:02 IST

ಶಿವಮೊಗ್ಗ: ಪದವೀಧರರ ಸಹಕಾರ ಸಂಘ ಈ ವರ್ಷ50ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದೆ. ಸುವರ್ಣ ಸಂಭ್ರಮದ ನೆನಪಿಗಾಗಿತನ್ನ ಸದಸ್ಯರಿಗೆ ಹಲವು ಸೌಲಭ್ಯಗಳನ್ನು ನೀಡಲು ನಿರ್ಧರಿಸಿದೆ ಎಂದು ಸಂಘದ ಅಧ್ಯಕ್ಷ ಎಸ್.ಪಿ.ದಿನೇಶ್ ಹೇಳಿದರು.

163 ಸದಸ್ಯರಿಂದಆರಂಭವಾದ ಪದವೀಧರರ ಸಹಕಾರ ಸಂಘಇಂದು6 ಸಾವಿರಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ದುಡಿಮೆಯ ಬಂಡವಾಳ₹ 58ಕೋಟಿಗೆ ಏರಿದೆ. ₹9ಕೋಟಿ ಸ್ವಂತ ಬಂಡವಾಳ ಹೊಂದಿದೆ. ಪ್ರಸಕ್ತ ಸಾಲಿನಲ್ಲಿ ₹ 1.10 ಕೋಟಿ ನಿವ್ವಳ ಲಾಭಪಡೆದಿದೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಸುವರ್ಣ ಸಂಭ್ರಮದ ನೆನಪಿಗಾಗಿ ಸದಸ್ಯರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲನೀಡಲಾಗುವುದು. ₹ 75 ಲಕ್ಷದವರೆಗೆ ಶೇ 8.5ರ ಬಡ್ಡಿದರದಲ್ಲಿನಿವೇಶನ, ಮನೆಸಾಲ ನೀಡಲಾಗುವುದು. ಜತೆಗೆ, ವಿಶೇಷ, ವೈಯುಕ್ತಿಕ, ಶೈಕ್ಷಣಿಕ, ಅಡಮಾನ, ಗೃಹ ರಿಪೇರಿ, ಬಂಗಾರದ ಮೇಲೆ, ವಾಹನ ಖರೀದಿಗೂ ಸಾಲ ನೀಡಲಾಗುತ್ತಿದೆ. ಈ ಸಾಲಗಳು ಸಹ ಮುಂದುವರಿಯುತ್ತವೆ. 25ತಿಂಗಳುಠೇವಣಿ ಇಟ್ಟವರಿಗೆ ಶೇ 7.5ರಷ್ಟು ಬಡ್ಡಿ ನೀಡಲಾಗುವುದು ಎಂದರು.

ADVERTISEMENT

ಕೃಷಿ ನಗರದಲ್ಲಿಸುವರ್ಣನೆನಪಿಗಾಗಿ ಶಾಖೆ ತೆರೆಯಲು ನಿವೇಶನ ಖರೀದಿಸಲಾಗಿದೆ. ಶಿಕ್ಷಣ ಸಂಸ್ಥೆ ಹಾಗೂ ಆಸ್ಪತ್ರೆ ಪ್ರಾರಂಭಿಸುವ ಯೋಜನೆ ಇದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷೆ ಎಸ್.ಮಮತಾ, ನಿರ್ದೇಶಕರಾದಜೋಗದ ವೀರಪ್ಪ, ಪಿ.ರುದ್ರೇಶ್, ಎಸ್.ರಾಜಶೇಖರ್, ಯು.ರಮ್ಯಾ, ಕಾರ್ಯದರ್ಶಿ ಟಿ.ವಿ. ಗೋಪಾಲಕೃಷ್ಣ, ಲೆಕ್ಕಾಧಿಕಾರಿ ಬಿ.ಎಸ್.ಕವಿತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.