
ರಿಪ್ಪನ್ ಪೇಟೆ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಅರಸಾಳು ಗ್ರಾಮದ ಗ್ರಾಮೀಣ ಪ್ರತಿಭೆ ಕವನಶ್ರೀ ಎಚ್.ಎಂ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಪುಸ್ತಕದಲ್ಲಿ ತಮ್ಮ ಹೆಸರನ್ನು ದಾಖಲಿಸುವ ಮೂಲಕ ದಾಖಲೆ ನಿರ್ಮಿಸಿದ್ದಾರೆ.
ಕವನಶ್ರೀ ಪ್ರಸ್ತುತ ಫ್ಯಾಷನ್ ಉಡುಪು ವಿನ್ಯಾಸದಲ್ಲಿ ಎಂ.ಎಸ್ಸಿ ಅಧ್ಯಯನ ಮಾಡುತ್ತಿದ್ದು ಚೆನ್ನೈನ ಎಸ್.ಆರ್.ಎಂ. ಆಡಿಟೋರಿಯಂನಲ್ಲಿ ನಡೆದ ವಿಶಿಷ್ಟ ‘ಸ್ಯಾಂಪಲ್ಸ್ ಡಿಸ್ಪ್ಲೇ’ ಕಾರ್ಯಕ್ರಮದಲ್ಲಿ, ಕವನಶ್ರೀ ಅವರು ಮದರ್ ಇಂಡಿಯಾಸ್ ಕ್ರೋಶೆಕ್ವೀನ್ಸ್ ವಿಭಾಗದಲ್ಲಿ 1,00,581 ಕ್ರೋಶೆ ಸ್ಕ್ವೇರ್ ಸ್ಯಾಂಪಲ್‌ಗಳನ್ನು ತಯಾರಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ಕವನಶ್ರೀ, ತಮ್ಮ ನೈಪುಣ್ಯ ಮತ್ತು ಕೌಶಲದಿಂದ ಅಂತರರಾಷ್ಟ್ರೀಯ ಮಾನ್ಯತೆ ಪಡೆದು ಅರಸಾಳು ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.
ನಾಲ್ಕು ತಿಂಗಳ ಹಿಂದೆ ರಸ್ತೆ ಅಪಘಾತದಲ್ಲಿ ನಿಧನರಾದ ಕೋಟೆತಾರಿಗ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮಂಜಯ್ಯ ಟಿ. ಹಾಗೂ ಅರಸಾಳು ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಕುಸುಮಾವತಿ ಅವರ ಪುತ್ರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.