ADVERTISEMENT

ದ್ವೇಷಭಾಷಣ ವಿರೋಧಿ ಮಸೂದೆ; ಈಶ್ವರಪ್ಪ, ಚೆನ್ನಿಗೆ ಭಯ: ಕಾಂಗ್ರೆಸ್ ಮುಖಂಡ ಯೋಗೀಶ್

​ಪ್ರಜಾವಾಣಿ ವಾರ್ತೆ
Published 3 ಜನವರಿ 2026, 6:21 IST
Last Updated 3 ಜನವರಿ 2026, 6:21 IST
ಎಚ್.ಸಿ.ಯೋಗೀಶ್
ಎಚ್.ಸಿ.ಯೋಗೀಶ್   

ಶಿವಮೊಗ್ಗ: ದ್ವೇಷ ಭಾಷಣಕ್ಕೆ ಕಾನೂನಿನ ದಂಡನೆ ಆರಂಭವಾದರೆ ಶಾಸಕ ಎಸ್.ಎನ್. ಚನ್ನಬಸಪ್ಪ ಹಾಗೂ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರಿಗೆ ರಾಜಕೀಯ ನಿರುದ್ಯೋಗಿಗಳಾಗುವ ಭಯ. ಹೀಗಾಗಿಯೇ ರಾಜ್ಯ ಸರ್ಕಾರದ ದ್ವೇಷ ಭಾಷಣ ವಿರೋಧ ಕಾಯ್ದೆಗೆ ಇಬ್ಬರೂ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಎಚ್.ಸಿ. ಯೋಗೀಶ್ ಲೇವಡಿ ಮಾಡಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಸೂದೆಗೆ ವಿರೋಧ ಮಾಡುವುದನ್ನು ಬಿಟ್ಟು ಕೆ.ಎಸ್‌. ಈಶ್ವರಪ್ಪ ಅವರು 25 ವರ್ಷಗಳ ಕಾಲ ಶಾಸಕರಾಗಿ, ಸಚಿವರಾಗಿ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳ ಕೈಪಿಡಿ ಹೊರತರಲಿ ಎಂದು ಸವಾಲು ಹಾಕಿದರು.

ದ್ವೇಷ ಭಾಷಣ ಮತ್ತು ದ್ವೇಷ ಅಪರಾಧ ನಿಯಂತ್ರಣ ವಿಧೇಯಕವನ್ನು ಸದಾ ದ್ವೇಷಭಾಷಣದಲ್ಲೇ ನಿರತರಾಗಿರುವ ಈಶ್ವರಪ್ಪ ಮತ್ತು ಅವರ ಮಾನಸ ಪುತ್ರ ಎಸ್.ಎನ್. ಚನ್ನಬಸಪ್ಪ ಅವರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಇನ್ನು ಮುಂದೆ ಸಾರ್ವಜನಿಕರನ್ನು ದ್ವೇಷ ಭಾಷಣದ ಮೂಲಕ ಪ್ರಚೋದಿಸಲು ಈ ಕಾಯ್ದೆ ಅಡ್ಡಿಯಾಗಲಿದೆ ಎಂಬುದು ಅವರ ಚಿಂತೆಗೆ ಮೂಲ. ಇನ್ನು ಮುಂದಾದರೂ ಈಶ್ವರಪ್ಪ ಮತ್ತು ಶಾಸಕ ಚನ್ನಬಸಪ್ಪ ಶಿವಮೊಗ್ಗದಲ್ಲಿ ಕೋಮ ಸೌಹಾರ್ದಕ್ಕೆ ಶ್ರಮಿಸಲಿ ಎಂದು ಸಲಹೆ ನೀಡಿದರು.

ಮಹಾನಗರ ಪಾಲಿಕೆ ಮಾಜಿ ಸದಸ್ಯ ವಿಶ್ವನಾಥ್‌ ಕಾಶಿ, ಮುಖಂಡರಾದ ಶಿವಕುಮಾರ್, ಆಸಿಫ್‌ ಮಸೂದ್, ಮುನ್ನಾ, ಗಂಗಾಧರ್ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.