ಶಿಕಾರಿಪುರ: ತಾಲ್ಲೂಕಿನಲ್ಲಿ ಭಾನುವಾರ ಸುರಿದ ಮಳೆಯಿಂದಾಗಿ ಕವಾಸಪುರ ಗ್ರಾಮದಲ್ಲಿ ಮನೆ ಹಾಗೂ ಕೊಟ್ಟಿಗೆಗೆ ಹಾನಿಯಾಗಿದೆ.
ಗ್ರಾಮದ ಬುಡ್ಡಮ್ಮ ಅವರ ಮನೆ ಮೇಲೆ ಮರ ಬಿದ್ದು ಅಪಾರ ಹಾನಿಯಾಗಿದೆ. ಮಮತಾಜ್‌ಬಿ ಅವರ ಮನೆ ಮೇಲೆ ಮರ ಬಿದ್ದಿದೆ. ಗಾಯಿತ್ರಿಬಾಯಿ ಆನಂದನಾಯ್ಕ ಅವರ ಮನೆಯ ತಗಡಿನ ಶೀಟ್ ಹಾರಿಹೋಗಿದೆ. ಚನ್ನಪ್ಪ ಅವರ ತೋಟದಲ್ಲಿ 30ಕ್ಕೂ ಹೆಚ್ಚು ಅಡಿಕೆ ಮರಗಳು ಬಿದ್ದಿವೆ. ಕುಟ್ರಳ್ಳಿಯಲ್ಲಿ ಮನೆಯೊಂದರ ಶೀಟ್ ಹಾರಿ ಹೋಗಿದೆ, ಕಪ್ಪನಹಳ್ಳಿ ಗ್ರಾಮದಲ್ಲಿ 2 ಕೊಟ್ಟಿಗೆಯ ಚಾವಣಿ ಕುಸಿದಿದ್ದು, ಗೋಡೆಗೆ ಹಾನಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.