ADVERTISEMENT

ಶರಾವತಿ ಹಿನ್ನೀರಿನ ಪ್ರದೇಶಗಳಲ್ಲಿ ಭೂಕುಸಿತ: ಸ್ಥಳ ತೊರೆಯಲು ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2020, 2:13 IST
Last Updated 19 ಆಗಸ್ಟ್ 2020, 2:13 IST
ಕಾರ್ಗಲ್ ಸಮೀಪದ ನಂದೋಡಿ ಗ್ರಾಮದಲ್ಲಿ ಗುಡ್ಡ ಕುಸಿದ ಪ್ರದೇಶಗಳಿಗೆ ವಿಜ್ಞಾನಿಗಳ ತಂಡದೊಂದಿಗೆ ಅನಂತ ಹೆಗಡೆ ಅಶೀಸರ ಭೇಟಿ ನೀಡಿದರು.
ಕಾರ್ಗಲ್ ಸಮೀಪದ ನಂದೋಡಿ ಗ್ರಾಮದಲ್ಲಿ ಗುಡ್ಡ ಕುಸಿದ ಪ್ರದೇಶಗಳಿಗೆ ವಿಜ್ಞಾನಿಗಳ ತಂಡದೊಂದಿಗೆ ಅನಂತ ಹೆಗಡೆ ಅಶೀಸರ ಭೇಟಿ ನೀಡಿದರು.   

ಕಾರ್ಗಲ್: ಶರಾವತಿ ಹಿನ್ನೀರಿನ ಪ್ರದೇಶಗಳಾದ ನಂದೋಡಿ, ಆರೋಡಿ ಮತ್ತು ಮಂಡವಳ್ಳಿಯಲ್ಲಿ ಬೆಟ್ಟ ಕುಸಿಯುವ ಸ್ಥಿತಿ ಇದ್ದು, ತಕ್ಷಣವೇ ಜನರು ಸ್ಥಳ ತೊರೆಯಬೇಕು ಎಂದುರಾಜ್ಯ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರಎಚ್ಚರಿಸಿದರು.

ಇಲ್ಲಿಗೆ ಸಮೀಪದ ನಂದೋಡಿಯ ಬೃಹತ್ ಬೆಟ್ಟದ ಸಾಲುಗಳು ಕುಸಿದು, ಹಾನಿಯಾಗಿರುವ ಪ್ರದೇಶಗಳಿಗೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.

ಸ್ಥಳ ತೊರೆಯುವ ಜನರಿಗೆ ಪುನ ರ್ವಸತಿ ಸೌಲಭ್ಯ ಕಲ್ಪಿಸಲು ಮುಖ್ಯಮಂತ್ರಿ ಜತೆ ಚರ್ಚಿಸಲಾಗುವುದು.ರಾಜ್ಯದ ಪ್ರಮುಖ ಭೂ ವಿಜ್ಞಾನಿಗಳ ತಂಡಈ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈಗಾಗಲೇ ಹಲವು ಗುಡ್ಡಗಳು ಕುಸಿದಿವೆ. ಕೆಲವು ಬಿರುಕು ಬಿಟ್ಟಿವೆ. ದೊಡ್ಡ ಪ್ರಮಾಣದಲ್ಲಿ ಬೆಟ್ಟಗಳು ಕುಸಿಯುವ ಸಾಧ್ಯತೆಇದೆ. ಇದು ಅತ್ಯಂತ ಅಪಾಯಕಾರಿ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ADVERTISEMENT

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್ ಕುಮಾರ್, ಹವಾಮಾನ ಇಲಾಖೆ ಪ್ರಧಾನ ನಿರ್ದೇಶಕ ಶ್ರೀನಿವಾಸ ರೆಡ್ಡಿ, ಭೂ ವಿಜ್ಞಾನಿ ಮಾರುತಿ, ಪರಿಸರ ತಜ್ಞ ಕೇಶವ ಕೊರ್ಸೆ, ಡಿಎಫ್‌ಒ ಮೋಹನ್ ಕುಮಾರ್, ಅರಣ್ಯಾಧಿಕಾರಿ ಪ್ರೀತಿ ರಾಮದಾಸ ನಾಯ್ಕ, ಛಾಯಾ, ಸೇರಿದಂತೆ ಹಲವರು ಹಾಜರಿದ್ದರು.

ಈ ಪ್ರದೇಶಗಳಲ್ಲಿಬೆಟ್ಟ ಕುಸಿಯು ತ್ತಿರುವ ವಿಷಮ ಸ್ಥಿತಿ ಕುರಿತು ‘ಪ್ರಜಾವಾಣಿ’ ಆ.18ರ ಸಂಚಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.