ಹೊಳೆಹೊನ್ನೂರು: ದೇವರ ಮೇಲಿನ ಭಕ್ತಿಯ ಜೊತೆಗೆ ಮನುಷ್ಯನ ಪ್ರಯತ್ನ ಇರಬೇಕೆಂದು ಶಿವಮೊಗ್ಗ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ ತಿಳಿಸಿದರು.
ಸಮೀಪದ ಸೈದರಕಲ್ಲಹಳ್ಳಿ ಗ್ರಾಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ಮೆದುಳು ಆರೋಗ್ಯ ಮತ್ತು ಮನಸ್ಸಿನ ಆರೋಗ್ಯ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಮೂಢನಂಬಿಕೆಗೆ ಬಲಿಯಾಗಿ ಅನೇಕರು ಇಂದು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಆದ್ದರಿಂದ ಸಾರ್ವಜನಿಕರು ಕೇವಲ ದೇವರ ಬಳಿ ಹೋದರೆ ಸಾಲದು, ಅದರ ಜೊತೆ ವೈದ್ಯರ ಮಾರ್ಗದರ್ಶನ ಪಡೆದು ನಮ್ಮ ಆರೋಗ್ಯದ ಜೊತೆ ಮನಸ್ಸನ್ನೂ ಹತೋಟಿಯಲ್ಲಿ ಇಡಬೇಕು ಎಂದರು.
ಜನರ ಆರೋಗ್ಯ ಸಮಸ್ಯೆಗಳನ್ನ ವೈದ್ಯರ ಬಳಿ ತಿಳಿಸಿದಾಗ ಮಾತ್ರ ಅವರ ಮಾನಸಿಕ ಮತ್ತು ಆರೋಗ್ಯದ ಸಮಸ್ಯೆ ಬಗೆಹರಿಯುತ್ತದೆ ಎಂದರು.
ಶಿವಮೊಗ್ಗ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಕಿರಣ್ ಎಸ್.ಕೆ, ಮನೋವೈದ್ಯ ಸಚಿನ್, ಬೆಂಗಳೂರಿನ ಐ.ಎಸ್.ಇ.ಸಿ. ಪ್ರೊ ಲೇಖಾ, ಗ್ರಾಮ ಪಂಚಾಯಿತಿ ಅಧ್ಯಕ್ಷ ಅಣ್ಣಪ್ಪ, ಪಿಡಿಒ ಸೋಮಶೇಖರಪ್ಪ, ಗ್ರಾಮ ಪಂಚಾಯಿತಿ ಸದಸ್ಯರು, ಆಶಾ ಕಾರ್ಯಕರ್ತೆಯಾರು, ಗ್ರಾಮಸ್ಥರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.