ಬಂಧನ
(ಪ್ರಾತಿನಿಧಿಕ ಚಿತ್ರ)
ಶಿವಮೊಗ್ಗ: ಹೊಸನಗರ ತಾಲ್ಲೂಕಿನ ಮೇಲಿನ ಸಂಪಳ್ಳಿಯ ವಿಜಾಪುರದಲ್ಲಿ ಕತ್ತಿಯಿಂದ ಹೊಡೆದು ಹಸುವಿನ ಕೆಚ್ಚಲಿಗೆ ಗಾಯ ಮಾಡಿದ ಆರೋಪದ ಮೇಲೆ ರಾಮಚಂದ್ರ ನಾಯ್ಕ ಎಂಬವರನ್ನು ಸೋಮವಾರ ಬಂಧಿಸಲಾಗಿದೆ.
ಸ್ಥಳೀಯರಾದ ನವೀನ್ ಶೆಟ್ಟಿ ಎಂಬವರ ಹಸುವಿನ ಕೆಚ್ಚಲು ಗಾಯಗೊಂಡು ರಕ್ತ ಸೋರುತ್ತಿದ್ದ ಸ್ಥಿತಿಯಲ್ಲಿ ಭಾನುವಾರ ಪತ್ತೆಯಾಗಿತ್ತು. ಈ ಬಗ್ಗೆ ಹೊಸನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ನವೀನ್ ಶೆಟ್ಟಿ ಅವರ ದನಗಳು ಪದೇಪದೇ ತೋಟಕ್ಕೆ ಮೇಯಲು ಬಂದು ತೊಂದರೆ ಕೊಡುತ್ತಿದ್ದವು ಎಂಬ ಕಾರಣಕ್ಕೆ ರಾಮಚಂದ್ರ ನಾಯ್ಕ ಸಿಟ್ಟಿನಿಂದ ಕತ್ತಿ ಹಾಗೂ ಕೋಲಿನಿಂದ ಹೊಡೆದು ಹಸುವನ್ನು ಗಾಯಗೊಳಿಸಿರುವುದು ವಿಚಾರಣೆ ವೇಳೆ ತಿಳಿದು ಬಂದಿದೆ. ರಾಮಚಂದ್ರ ನಾಯ್ಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಹೊಸನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.