ADVERTISEMENT

ಹೊಸನಗರ | ವಿದ್ಯುತ್ ಅವಘಡ: ಮನೆ ವಸ್ತು ಭಸ್ಮ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2025, 5:28 IST
Last Updated 21 ಆಗಸ್ಟ್ 2025, 5:28 IST
ಹೊಸನಗರ ತಾಲ್ಲೂಕು ಗೊರಗೋಡು ಗ್ರಾಮದಲ್ಲಿ ವಿದ್ಯುತ್ ಅವಘಡದಲ್ಲಿ ಸುಟ್ಟು ಹೋದ ಮನೆ ವಸ್ತುಗಳು
ಹೊಸನಗರ ತಾಲ್ಲೂಕು ಗೊರಗೋಡು ಗ್ರಾಮದಲ್ಲಿ ವಿದ್ಯುತ್ ಅವಘಡದಲ್ಲಿ ಸುಟ್ಟು ಹೋದ ಮನೆ ವಸ್ತುಗಳು   

ಹೊಸನಗರ: ತಾಲ್ಲೂಕಿನ ಮೇಲಿನ ಬೇಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊರಗೋಡು ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಮನೆಯೊಂದು ಹೊತ್ತಿ ಉರಿದಿದೆ. ಇದರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.  

ಗ್ರಾಮದ ಲಕ್ಷ್ಮಣ್ ಗೌಡ ಅವರ ಮಾಲೀಕತ್ವದ ಮನೆಯಲ್ಲಿ ಶೇಷ ಪವನ್ ಹಾಗೂ ಪ್ರತಿಭಾ ದಂಪತಿ ಬಾಡಿಗೆಗೆ ವಾಸವಾಗಿದ್ದರು. ದಂಪತಿ ಬುಧವಾರ ಹೊರಗೆ ಹೋಗಿದ್ದಾಗ ಶಾರ್ಟ್ ಸರ್ಕಿಟ್ ಉಂಟಾಗಿ ಮನೆಗೆ ಬೆಂಕಿ ತಗುಲಿದೆ.

ಈ ಸಂದರ್ಭದಲ್ಲಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ಸ್ಥಳೀಯರೊಬ್ಬರು ಗಮನಿಸಿ ಅಗ್ನಿಶಾಮಕ ದಳ ಠಾಣೆಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು.

ADVERTISEMENT

ಮನೆಯಲ್ಲಿದ್ದ ಗೃಹ ಉಪಯೋಗಿ ವಸ್ತುಗಳು ಹಾಗೂ ಹೊಸ ಮನೆ ನಿರ್ಮಾಣಕ್ಕೆ ತಂದಿಟ್ಟಿದ್ದ ₹ 2 ಲಕ್ಷಕ್ಕೂ ಅಧಿಕ ಮೌಲ್ಯದ ಎಲೆಕ್ಟ್ರಿಕಲ್ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.

ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಆನಂದಪ್ಪ ಎನ್, ಸಿಬ್ಬಂದಿ ಕೆ.ಟಿ. ರಾಜಪ್ಪ, ನರೇಶ್, ಮಂಜುನಾಥ್ ಬಿ, ಆಂಜನೇಯ ಬಿ.ಸಿ, ಭೀಷ್ಮಚಾರಿ, ಪೊಲೀಸ್ ಸಿಬ್ಬಂದಿ ಶಿವಕುಮಾರ್, ಯಶೋದಮ್ಮ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.