ADVERTISEMENT

ಹೊಸನಗರ: ಅಂಗಳಕ್ಕೆ ಬಿದ್ದ ಕಾರು

​ಪ್ರಜಾವಾಣಿ ವಾರ್ತೆ
Published 8 ಮೇ 2025, 15:47 IST
Last Updated 8 ಮೇ 2025, 15:47 IST
ಹೊಸನಗರ ಸಮೀಪದ ಜಯನಗರದಲ್ಲಿ ಮನೆ ಅಂಗಳದಲ್ಲಿ ಬಿದ್ದಿರುವ ಕಾರು
ಹೊಸನಗರ ಸಮೀಪದ ಜಯನಗರದಲ್ಲಿ ಮನೆ ಅಂಗಳದಲ್ಲಿ ಬಿದ್ದಿರುವ ಕಾರು   

ಹೊಸನಗರ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು, ರಸ್ತೆ ಪಕ್ಕದ ಮನೆಯ ಅಂಗಳದಲ್ಲಿ ಬಿದ್ದಿರುವ ಘಟನೆ ರಾಣೆಬೆನ್ನೂರು–ಬೈಂದೂರು ರಾಷ್ಟ್ರೀಯ ಹೆದ್ದಾರಿಯ ಜಯನಗರ ಸಮೀಪ ನಡೆದಿದೆ.

ಗುರುವಾರ ಸಂಜೆ ಗೋವಾದಿಂದ ಬಂದ ಕಾರು, ಜಯನಗರದ ನದಿ ತಿರುವಿನಲ್ಲಿ ನಿಯಂತ್ರಣ ತಪ್ಪಿ, ಮರಕ್ಕೆ ತಾಗಿದೆ. ನಂತರ ಪಕ್ಕದಲ್ಲಿದ್ದ ಮನೆ ಅಂಗಳಕ್ಕೆ ಪಲ್ಟಿಯಾಗಿದೆ. 

ಕಾರಿನಲ್ಲಿ ಮೂರು ಮಂದಿ ಪ್ರಯಾಣಿಸುತ್ತಿದ್ದು, ಅವರಿಗೆ ಸಣ್ಣಪುಟ್ಟ ಗಾಯವಾಗಿದೆ. ಅವರನ್ನು ಹೊಸನಗರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. 

ADVERTISEMENT

ಹೊಸನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.