ADVERTISEMENT

ಹೊಸನಗರ: ಆಶ್ರಯ ಕಾಲೋನಿಯಲ್ಲಿ ರಸ್ತೆ ಕೆಸರುಮಯ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 14:26 IST
Last Updated 25 ಜುಲೈ 2024, 14:26 IST
ಹೊಸನಗರ ಪಟ್ಟಣದ ಆಶ್ರಯ ಕಾಲೋನಿಯಲ್ಲಿನ ರಸ್ತೆ ಕೆಸರು ಗದ್ದೆಯಾಗಿರುವುದು
ಹೊಸನಗರ ಪಟ್ಟಣದ ಆಶ್ರಯ ಕಾಲೋನಿಯಲ್ಲಿನ ರಸ್ತೆ ಕೆಸರು ಗದ್ದೆಯಾಗಿರುವುದು   

ಹೊಸನಗರ: ಇಲ್ಲಿನ ಹಳೇ ಸಾಗರ ರಸ್ತೆಯ ಆಶ್ರಯ ಯೋಜನೆ ಅಡಿಯಲ್ಲಿ ನಿವೇಶನ ರಹಿತರಿಗೆ ಮಂಜೂರಾಗಿರುವ ಆಶ್ರಯ ಕಾಲೋನಿ ರಸ್ತೆಗಳಲ್ಲಿ ಜನ ಓಡಾಡಲು ಕಷ್ಟಕರವಾಗಿದೆ ಎಂದು ನಾಗರಿಕರು ದೂರಿದ್ದಾರೆ.

ಆ ಭಾಗದ ನಿವಾಸಿಗಳು ಈ ರಸ್ತೆಯನ್ನೇ ಆಶ್ರಯಿಸಿದ್ದಾರೆ. ಬೇಸಿಗೆಯಲ್ಲಿ ಅಕ್ರಮವಾಗಿ ಮರಳು ಸಾಗಿಸಲು ಹಾಗೂ ಮಳೆಗಾಲದಲ್ಲಿ ರಾತ್ರೋರಾತ್ರಿ ಅಕ್ರಮವಾಗಿ ನಾಟ ಸಾಗಾಟ ಮಾಡುವ ಟಿಪ್ಪರ್ ವಾಹನಗಳಿಂದ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಸಂಪೂರ್ಣ ಕೆಸರು ಗದ್ದೆಯಂತಾಗಿದೆ.

ವಿದ್ಯಾರ್ಥಿಗಳು, ಅನಾರೋಗ್ಯ ಪೀಡಿತರು ಹಾಗೂ ವಯೋವೃದ್ದರಿಗೆ ಸಂಚಾರಕ್ಕೆ ಭಾರಿ ತೊಂದರೆ ಆಗಿದೆ. ವಿಷಯ ತಿಳಿದಿದ್ದರೂ ಯಾವೊಬ್ಬ ಜನ ಪ್ರತಿನಿಧಿ ಸೇರಿದಂತೆ ಪಟ್ಟಣ ಪಂಚಾಯತಿ ಅಧಿಕಾರಿಗಳು ಕ್ರಮಕ್ಕೆ ಮುಂದಾಗದಿರುವ ಕ್ರಮ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ADVERTISEMENT

ಪೊಲೀಸ್ ಇಲಾಖೆ ಅಕ್ರಮ ಮರಳು ಸಾಗಾಟ ತಡೆಗೆ ಕೂಡಲೇ ಮುಂದಾಗಬೇಕು. ತಾಲ್ಲೂಕು ಆಡಳಿತವು ರಸ್ತೆ ದುರಸ್ತಿಗೆ ಕೂಚಿಡಲೇ ಮುಂದಾಗಬೇಕೆಂದು ಜನತೆ ಒತ್ತಾಯಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.