ADVERTISEMENT

ವೀರಾಂಜನೇಯ ಸ್ವಾಮಿ ವರ್ಧಂತ್ಯುತ್ಸವ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2025, 15:42 IST
Last Updated 11 ಏಪ್ರಿಲ್ 2025, 15:42 IST

ಹೊಸನಗರ: ಇಲ್ಲಿನ ನಗರ ರಸ್ತೆಯಲ್ಲಿರುವ ವೀರಾಂಜನೇಯ ಸ್ವಾಮಿ ದೇವಸ್ಥಾನದ 17ನೇ ವರ್ಧಂತ್ಯುತ್ಸವ, ಹನುಮ ಜಯಂತಿ ಕಾರ್ಯಕ್ರಮ ಹಾಗೂ ಶ್ರೀದೇವರ ಮೊದಲ ವರ್ಷದ ರಥೋತ್ಸವ ಏ.12ರಂದು ನೆರವೇರಲಿದೆ.

ಬೆಳಿಗ್ಗೆ 7 ಗಂಟೆಯಿಂದ ವಿಶೇಷ ಧಾರ್ಮಿಕ ಪೂಜಾ ವಿಧಿ ವಿಧಾನ ನೆರವೇರಲಿದ್ದು, ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣ ಕಾರ್ಯಕ್ರಮ ಇದೆ. ಸಂಜೆ 5ಕ್ಕೆ ಸ್ವಾಮಿಯ ರಥೋತ್ಸವ ಶೋಭಾಯಾತ್ರೆ ರಾಜ ಬೀದಿಯಲ್ಲಿ ಸಾಗಿ ಬರಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಮಿತಿ ಪದಾಧಿಕಾರಿಗಳು ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT