ADVERTISEMENT

ರಸ್ತೆಗೆ ಬಿದ್ದ ಮರ: 4 ಗಂಟೆ ಸಂಚಾರ ಬಂದ್

​ಪ್ರಜಾವಾಣಿ ವಾರ್ತೆ
Published 24 ಜುಲೈ 2024, 14:52 IST
Last Updated 24 ಜುಲೈ 2024, 14:52 IST
ಹೊಸನಗರ ತಾಲ್ಲೂಕಿನ ನಗರ ಮುಂಡಳ್ಳಿ ಸಮೀಪ ರಸ್ತೆ ಅಡ್ಡಲಾಗಿ ಬಿದ್ದ ಮರ ತೆರವುಗೊಳಿಸಲಾಯಿತು
ಹೊಸನಗರ ತಾಲ್ಲೂಕಿನ ನಗರ ಮುಂಡಳ್ಳಿ ಸಮೀಪ ರಸ್ತೆ ಅಡ್ಡಲಾಗಿ ಬಿದ್ದ ಮರ ತೆರವುಗೊಳಿಸಲಾಯಿತು   

ಹೊಸನಗರ: ಮುಂಡಳ್ಳಿ ಸಮೀಪ ಬೃಹತ್ ಮರವೊಂದು ಬೆಳಗಿನ ಜಾವ ರಸ್ತೆಗೆ ಅಡ್ಡಲಾಗಿ ಬಿದ್ದು 4 ಗಂಟೆ ಸಂಚಾರ ಸ್ಥಗಿತಗೊಂಡ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ.

ಈ ಭಾಗದಲ್ಲಿ ರಾತ್ರಿ ಭಾರೀ ಬಿರುಗಾಳಿ ಸಹಿತ ಮಳೆ ಸುರಿದಿದ್ದು, ಗಾಳಿಯ ರಭಸಕ್ಕೆ ಮರ ನೆಲಕ್ಕುರುಳಿದೆ. ಶಿವಮೊಗ್ಗ, ಉಡುಪಿ‌ ನಡುವಿನ ಪ್ರಮುಖ ಮಾರ್ಗ ಇದಾಗಿದ್ದು, ಬೆಳಗಿನ ಜಾವ ವಾಹನ ದಟ್ಟಣೆ ಅಷ್ಟಾಗಿರಲಿಲ್ಲ.

ಅರಣ್ಯ ಇಲಾಖೆ ಮತ್ತು ಸ್ಥಳೀಯರ ಸಹಭಾಗಿತ್ವದಲ್ಲಿ ಮರ ತೆರವು ಕಾರ್ಯಾಚರಣೆ ನಡೆಸಲಾಯಿತು. ಬೆಳಿಗ್ಗೆ 3 ಗಂಟೆಗೆ ಸ್ಥಗಿತಗೊಂಡಿದ್ದ ಸಂಚಾರ ಬೆಳಿಗ್ಗೆ 7ಕ್ಕೆ ಸಂಚಾರ ಮುಕ್ತವಾಯಿತು.

ADVERTISEMENT

ಉಪವಲಯ ಅರಣ್ಯಾಧಿಕಾರಿ ಅಮೃತ್ ಮತ್ತು ಸಿಬ್ಬಂದಿ, ಶಾಸಕರ ಆಪ್ತ ಸಹಾಯಕ ರಾಜೇಶ ಹಿರಿಮನೆ, ದೇವು ಕಂದ್ಲಕೊಪ್ಪ, ಕೆ.ಕೆ.ರಾಮಣ್ಣ, ಯೋಗೇಂದ್ರ ಪಡುಕೋಣೆ, ದೀಕ್ಷಿತ್ ಮುಂಡಳ್ಳಿ ಸ್ಥಳೀಯರು ಮರ ತೆರವಿಗೆ ಸಹಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.