ಭದ್ರಾವತಿ: ಹಳೇ ನಗರದ ಕೆಎಸ್‌ಆರ್‌ಟಿಸಿ ಬಸ್ ಘಟಕ ಸಮೀಪ ದೇವರಾಜ ಅರಸ್ ಬಡಾವಣೆಯಲ್ಲಿ ಈಚೆಗೆ ದುಷ್ಕರ್ಮಿಗಳು ಮನೆಯೊಂದರ ಬೀಗ ಮುರಿದು ನಗದು, ಚಿನ್ನಾಭರಣ ಕಳವು ಮಾಡಿದ್ದಾರೆ.
ಎಂ.ಜಿ.ರಮೇಶ್ ಮತ್ತು ಕುಟುಂಬದವರು ಊರಿಗೆ ಹೋಗಿದ್ದಾಗ ಕಾಂಪೌಂಡ್ ಗೇಟ್ ಹಾರಿ ಮನೆಯ ಬಾಗಿಲ ಬೀಗ ಮುರಿದು ಕಳವು ಮಾಡಲಾಗಿದೆ.
ಬುಧವಾರ ಬೆಳಿಗ್ಗೆ 11 ಗಂಟೆ ಸಮಯದಲ್ಲಿ ಮನೆಯವರು ಊರಿಂದ ಬಂದು ನೋಡಿದಾಗ ಕಳವು ಮಾಡಿರುವುದು ಗೊತ್ತಾಗಿದೆ.
ಶ್ವಾನದಳ ಮತ್ತು ಬೆರಳಚ್ಚು ತಜ್ಞರ ತಂಡ ಹಾಗೂ ಹಳೇನಗರ ಪೊಲೀಸ್ ಠಾಣೆ ಉಪನಿರೀಕ್ಷಕ ಚಂದ್ರಶೇಖರ ನಾಯಕ್ ಮತ್ತು ಸಿಬ್ಬಂದಿ ಹಾಲಪ್ಪ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.