ADVERTISEMENT

ಬಲಿಜರು ಬಲಿಷ್ಠವಾದರೆ ಪ್ರಾತಿನಿಧ್ಯ ಸಾಧ್ಯ: ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2018, 13:03 IST
Last Updated 22 ಆಗಸ್ಟ್ 2018, 13:03 IST
ಶಿವಮೊಗ್ಗದ ಲಗಾನ್ ಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಕೈವಾರ ತಾತಯ್ಯನವರ 183ನೇ ಆರಾಧನಾ ಮಹೋತ್ಸವವನ್ನು ಶಾಸಕ ಕೆ.ಎಸ್. ಈಶ್ವರಪ್ಪ, ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಎಂ.ಆರ್. ಜಯರಾಜ್ ಉದ್ಘಾಟಿಸಿದರು.
ಶಿವಮೊಗ್ಗದ ಲಗಾನ್ ಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಕೈವಾರ ತಾತಯ್ಯನವರ 183ನೇ ಆರಾಧನಾ ಮಹೋತ್ಸವವನ್ನು ಶಾಸಕ ಕೆ.ಎಸ್. ಈಶ್ವರಪ್ಪ, ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಎಂ.ಆರ್. ಜಯರಾಜ್ ಉದ್ಘಾಟಿಸಿದರು.   

ಶಿವಮೊಗ್ಗ: ಕೈವಾರ ತಾತಯ್ಯನವರ ಆದರ್ಶಗಳನ್ನು ಮೈಗೂಡಿಸಿಕೊಂಡು ಬಲಿಜ ಸಮಾಜ ಬಲಿಷ್ಠವಾಗಿ ಬೆಳೆಯಬೇಕು. ಸಮಾಜದ ಅಭಿವೃದ್ಧಿಗೆ ಗಣನೀಯ ಕೊಡುಗೆ ನೀಡಬೇಕು ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಸಲಹೆ ನೀಡಿದರು.

ಲಗಾನ್ ಕಲ್ಯಾಣ ಮಂದಿರದಲ್ಲಿ ಜಿಲ್ಲಾ ಬಲಿಜ ಸೇವಾ ಸಂಘಬುಧವಾರ ಆಯೋಜಿಸಿದ್ದ ಶ್ರೀಕೈವಾರ ತಾತಯ್ಯನವರ 183ನೇ ಆರಾಧನಾ ಮಹೋತ್ಸವ ಹಾಗೂ ಶ್ರೀಯೋಗಿ ನಾರೇಯಣ ಬಲಿಜ ಸಮುದಾಯ ಭವನದ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಬಲಿಜ ಸಮಾಜ ಇದುವರೆಗೂ ಪೂರ್ಣಪ್ರಮಾಣದಲ್ಲಿ ಸಂಘಟಿತವಾಗಿಲ್ಲ. ಸಂಘಟಿತವಾದರೆ ಆರ್ಥಿಕ ಹಾಗೂ ರಾಜಕೀಯವಾಗಿ ಬಲಿಷ್ಠವಾಗಹುದು. ಸಮಾಜದ ಶ್ರೀಮಂತರು, ಆರ್ಥಿಕವಾಗಿ ಹಿಂದುಳಿದವರ ಮಕ್ಕಳ ಶಿಕ್ಷಣಕ್ಕೆ ನೆರವು ನೀಡಬೇಕು. ಸಮಾಜದ ಜನರನ್ನು ಮೇಲೆತ್ತಲು ಕೈಜೋಡಿಸಬೇಕು.ಪ್ರತಿಯೊಂದು ಸಮಾಜದ ಅಭಿವೃದ್ಧಿಗೆ ಆ ಸಮಾಜದ ಹಲವು ಗಣ್ಯರು, ಗುರುಗಳು ಶ್ರಮಿಸಿದ್ದಾರೆ. ಎಲ್ಲಾ ಸಮಾಜದಲ್ಲೂ ಬಡವರು, ಶ್ರೀಮಂತರು ಇರುವುದು ಸಹಜ. ಶಕ್ತಿ ಇದ್ದವರು ಸಮಾಜದ ಅಭಿವೃದ್ಧಿಗೆ ನೆರವು ನೀಡಿದರೆ ಸಮಾಜದ ಜನರು ಉದ್ದಾರವಾಗುತ್ತಾರೆ. ಅನುಕೂಲಸ್ಥರು ಆ ಮೂಲಕಸಮಾಜದ ಋಣ ತೀರಿಸಬಹುದು ಎಂದುಕಿವಿಮಾತು ಹೇಳಿದರು.

ADVERTISEMENT

ಕೈವಾರ ತಾತಯ್ಯ ಸಮಾಜಕ್ಕೆ ಸೂಕ್ತ ಮಾರ್ಗದರ್ಶನ ನೀಡಿದ್ದಾರೆ.ಅವರ ಆದರ್ಶ ಗುಣಎಲ್ಲರೂ ಪಾಲಿಸಬೇಕು.ಅವರ ಹೆಸರಿನಲ್ಲಿ ಭವನ ನಿರ್ಮಿಸಲು ಈಗಾಗಲೇ ಸರ್ಕಾರದಿಂದ ₨30 ಲಕ್ಷ ರೂ ಬಿಡುಗಡೆ ಮಾಡಿಸಿದ್ದೇನೆ. ಬಲಿಜ ಸಮಾಜದಸಹಕಾರ ಸಂಘಕ್ಕೆ ₨20 ಲಕ್ಷ ಅನುದಾನ ಕೊಡಿಸಿದ್ದೇನೆ. ಕಟ್ಟಡ ಪೂರ್ಣಗೊಳಿಸಲು ಎಲ್ಲ ರೀತಿಯನೆರವು ನೀಡಲಾಗುವುದು ಎಂದು ಭರವಸೆ ನೀಡಿದರು.

ಕೈವಾರ ಕ್ಷೇತ್ರದ ಧರ್ಮಾಧಿಕಾರಿಡಾ.ಎಂ.ಆರ್. ಜಯರಾಜ್, ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್, ಪೆರಿಕಲ್ ಎಂ. ಸುಂದರ್, ಎನ್. ಶ್ರೀನಿವಾಸ ಮೂರ್ತಿ, ಎಂ. ವೆಂಕಟೇಶ್, ಕುಚ್ಚಣ್ಣ ಶ್ರೀನಿವಾಸ್, ಶಂಕರ್ ಗನ್ನಿ, ವೆಂಕಟೇಶ್ ನಾಯ್ಡು, ರಘುಕುಮಾರ್, ಸುಬ್ರಹ್ಮಣ್ಯ, ಸತೀಶ್, ತಿಪ್ಪೇಸ್ವಾಮಿಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.