ADVERTISEMENT

ಸುಲ್ತಾನ್‌ ಗೋಲ್ಡ್‌ ಶೋ ರೂಂ ಮೇಲೆ ಐಟಿ ದಾಳಿ

​ಪ್ರಜಾವಾಣಿ ವಾರ್ತೆ
Published 27 ಜೂನ್ 2019, 15:37 IST
Last Updated 27 ಜೂನ್ 2019, 15:37 IST
ಸುಲ್ತಾನ್ ಗೋಲ್ಡ್‌ ಶೋ ರೂಂ
ಸುಲ್ತಾನ್ ಗೋಲ್ಡ್‌ ಶೋ ರೂಂ   

ಶಿವಮೊಗ್ಗ: ಇಲ್ಲಿನ ಗೋಪಿವೃತ್ತದ ದುರ್ಗಿಗುಡಿ ಮುಖ್ಯರಸ್ತೆಯಲ್ಲಿರುವ ಸುಲ್ತಾನ್‌ ಗೋಲ್ಡ್‌ಶೋ ರೂಂ ಮೇಲೆ ಗುರುವಾರ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳ ಪರಿಶೀಲನೆ ನಡೆಸಿದರು.

ಬೆಳಿಗ್ಗೆ 10ಕ್ಕೆ ಮಳಿಗೆ ಬಾಗಿಲು ತೆರೆದ ಸ್ವಲ್ಪ ಸಮಯದಲ್ಲೇ ಒಳ ಪ್ರವೇಶಿಸಿದ ಆರು ಅಧಿಕಾರಿಗಳ ತಂಡ ದಾಖಲೆಗಳ ಪರಿಶೀಲನೆ ಆರಂಭಿಸಿದರು. ತಕ್ಷಣ ಮುಂಭಾಗದ ಬಾಗಿಲು ಬಂದ್‌ ಮಾಡಿದ ಶೋ ರೂಂ ಸಿಬ್ಬಂದಿ ಗ್ರಾಹಕರಿಗೆ ಪ್ರವೇಶ ನಿರಾಕರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT