ADVERTISEMENT

ಜಡೆ: ಸಂಭ್ರಮದ ವಿಜಯ ದಶಮಿ ‌

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2021, 4:46 IST
Last Updated 16 ಅಕ್ಟೋಬರ್ 2021, 4:46 IST
ಸೊರಬ ತಾಲ್ಲೂಕಿನ ಸಂಸ್ಥಾನ ಮಠ ಜಡೆ ಗ್ರಾಮದಲ್ಲಿ ವಿಜಯ ದಶಮಿ ಪ್ರಯುಕ್ತ ಸಿದ್ಧವೃಷಭೇಂದ್ರ ಸ್ವಾಮೀಜಿ ಅವರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು
ಸೊರಬ ತಾಲ್ಲೂಕಿನ ಸಂಸ್ಥಾನ ಮಠ ಜಡೆ ಗ್ರಾಮದಲ್ಲಿ ವಿಜಯ ದಶಮಿ ಪ್ರಯುಕ್ತ ಸಿದ್ಧವೃಷಭೇಂದ್ರ ಸ್ವಾಮೀಜಿ ಅವರ ಗದ್ದುಗೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು   

ಸೊರಬ: ವಿಜಯ ದಶಮಿ ಅಂಗವಾಗಿ ತಾಲ್ಲೂಕಿನ ಜಡೆ ಗ್ರಾಮದಲ್ಲಿ ಜಡೆ ಸಂಸ್ಥಾನ ಮಠದ ಸಿದ್ಧವೃಷಭೇಂದ್ರ ಸ್ವಾಮೀಜಿ ಅವರ ಉತ್ಸವ ಮೂರ್ತಿಯ ಪಲ್ಲಕ್ಕಿ ಮೆರವಣಿಗೆ ಶುಕ್ರವಾರ ಸಂಭ್ರಮದಿಂದ ನೆರವೇರಿತು.

ಜಡೆಯ ಬಸವೇಶ್ವರ ದೇವಸ್ಥಾನದ ಆವರಣದ ಬನ್ನಿ ಮಂಟಪದಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ ಜರುಗಿತು.

ಆಶೀರ್ವಚನ ನೀಡಿದ ಜಡೆ ಸಂಸ್ಥಾನ ಮಠದ ಮಹಾಂತ ಸ್ವಾಮೀಜಿ, ‘ಬನ್ನಿ ಮುಡಿಯುವ ಹಬ್ಬ ಜನರ ಬದುಕಿನ ಬಾಂಧವ್ಯದ ಬೆಸುಗೆ. ಪರಿಸರ ರಕ್ಷಣೆಯ ಸಂಕೇತವಾಗಿದ್ದು, ಹಸುರಿನ ಮಹತ್ವ ಸಾರುವ ಹಬ್ಬ. ಬನ್ನಿ ಗಿಡವನ್ನು ಪರಸ್ಪರ ಹಂಚಿಕೊಳ್ಳುವ ಮೂಲಕ ರಾಗ, ದ್ವೇಷ, ಅಸೂಯೆಗಳನ್ನು ಮರೆತು ಮಾನವೀಯ ಸಂಬಂಧಗಳು ಪರಿಪಕ್ವಗೊಳ್ಳಲು ಸಹಾಯಕವಾಗುತ್ತದೆ. ಸ್ನೇಹ, ಪ್ರೀತಿ, ಬಾಂಧವ್ಯ ಉಳಿಸಿಕೊಳ್ಳುವ ಸಂದೇಶ ಸಾರುವ ಹಬ್ಬ ಇದು’ ಎಂದುಹೇಳಿದರು.

ADVERTISEMENT

ಜಡೆ ಯುವ ವೇದಿಕೆ ಸದಸ್ಯರು ಹಾಗೂ ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.