ADVERTISEMENT

ಮಂಜುನಾಥಗೌಡ ಹೋದರೆ ಜೆಡಿಎಸ್‌ಗೆ ನಷ್ಟವಿಲ್ಲ: ಆರ್‌.ಎ. ಚಾಬುಸಾಬ್

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2021, 6:16 IST
Last Updated 12 ಏಪ್ರಿಲ್ 2021, 6:16 IST

ರಿಪ್ಪನ್‌ಪೇಟೆ: ಕಾಂಗ್ರೆಸ್‌ ಸಖ್ಯ ಬಯಸಿ ಆರ್‌.ಎಂ. ಮಂಜುನಾಥಗೌಡ ಜೆಡಿಎಸ್‌ ತೊರೆದಿದ್ದು, ಇದರಿಂದ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ ಎಂದು ರಾಜ್ಯ ಜೆಡಿಎಸ್‌ ಪ್ರಧಾನ ಕಾರ್ಯದರ್ಶಿ ಆರ್‌.ಎ. ಚಾಬುಸಾಬ್‌ ಹೇಳಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಧಿಕಾರದ ದಾಹ, ಸ್ವಾರ್ಥ ರಾಜಕಾರಣ ಬಯಸುವವರಿಂದ ಜೆಡಿಎಸ್‌ ಪಕ್ಷಕ್ಕೆ ಲಾಭವಿಲ್ಲ. ಇದಕ್ಕೆ ಈಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯೇ ಸಾಕ್ಷಿ’ ಎಂದರು.

‘ರಾಷ್ಟ್ರೀಯ ಮುಖಂಡರು ಮೂಲ ಕಾರ್ಯಕರ್ತರಿಂದಲೇ ಪಕ್ಷ ಸಂಘಟನೆಗೆ ಒತ್ತು ನೀಡಬೇಕು. ಹಾಗೆ ಬಂದು ಹೀಗೆ ಹೋಗುವ ವಲಸಿಗರಿಗೆ ಪಕ್ಷದ ಸಾರಥ್ಯದ ಹೊಣೆಗಾರಿಕೆ ಮುಂದಿನ ದಿನಗಳಲ್ಲಿ ನೀಡಬಾರದು’ ಎಂದು ಎಚ್ಚರಿಸಿದರು.

ADVERTISEMENT

ಪಕ್ಷದ ಮುಖಂಡ ಆರ್‌.ಎನ್‌. ಮಂಜುನಾಥ, ರೈತ ಮುಖಂಡ ಮುಡಬ ಧರ್ಮಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.