ADVERTISEMENT

ಜೋಗ ಜಲಪಾತ ವೀಕ್ಷಣೆ: ಮಾರ್ಗಸೂಚಿಯಲ್ಲಿ ತಿದ್ದುಪಡಿ

ಯಾವುದಾದರೂ ಒಂದು ಪ್ರಮಾಣಪತ್ರ ಇದ್ದರೆ ಸಾಕು

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2021, 7:35 IST
Last Updated 14 ಆಗಸ್ಟ್ 2021, 7:35 IST
ಜೋಗ ಜಲಪಾತದ ವೈಭವ
ಜೋಗ ಜಲಪಾತದ ವೈಭವ   

ಕಾರ್ಗಲ್: ವಿಶ್ವವಿಖ್ಯಾತ ಜೋಗ ಜಲಪಾತದ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಆರ್.ಟಿ.ಪಿ.ಸಿ.ಆರ್ ನೆಗೆಟಿವ್‌ ವರದಿ ದೃಢೀಕರಣ ಪತ್ರ ಕಡ್ಡಾಯ ಎಂಬ ಜಿಲ್ಲಾಧಿಕಾರಿ ಆದೇಶಕ್ಕೆ ತಿದ್ದುಪಡಿ ಮಾಡಲಾಗಿದೆ ಎಂದು ಪ್ರವಾಸೋದ್ಯಮ ಜಂಟಿ ಕಾರ್ಯದರ್ಶಿ ಎಚ್.ಎಸ್. ರಾಮಕೃಷ್ಣ ಮಾಹಿತಿ ನೀಡಿದ್ದಾರೆ.

ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳಿಗೆ ಅನ್ವಯವಾಗುವಂತೆ 72 ಗಂಟೆಗಳ ಒಳಗಾಗಿ ಪಡೆದಿರುವ ಕೋವಿಡ್ ಆರ್.ಟಿ.ಪಿ.ಸಿ.ಆರ್. ನೆಗೆಟಿವ್‌ ವರದಿ, ರಾಟ್ ನೆಗೆಟಿವ್‌ ವರದಿ ಅಥವಾ ಕೋವಿಡ್ 2ನೇ ಲಸಿಕೆ ಪಡೆದಿರುವ ಬಗ್ಗೆ ಪ್ರಮಾಣಪತ್ರ ಈ ಮೂರರಲ್ಲಿ ಒಂದನ್ನು ಹಾಜರುಪಡಿಸಿದರೆ ಸಾಕು ಎಂದು ತಿದ್ದುಪಡಿ ಆದೇಶದಲ್ಲಿ ತಿಳಿಸಲಾಗಿದೆ. ವಾರಾಂತ್ಯದಲ್ಲಿ ಬರುವ ಪ್ರವಾಸಿಗರಿಗೂ ಇದೇ ಆದೇಶ ಮುಂದುವರಿಯುವುದು ಎಂದು ಅವರು ತಿಳಿಸಿದರು.

ಜಿಲ್ಲೆಯ ಹಲವು ಪ್ರವಾಸಿ ತಾಣಗಳಲ್ಲಿ ಜಾರಿಯಾಗುತ್ತಿರುವ ನೀತಿ ತಾರತಮ್ಯದಿಂದ ಕೂಡಿದೆ.

ADVERTISEMENT

ಜಿಲ್ಲೆಯಲ್ಲಿರುವ ತ್ಯಾವರೆಕೊಪ್ಪದ ಹುಲಿ–ಸಿಂಹಧಾಮ, ಸಕ್ರೆಬೈಲು ಆನೆ ಬಿಡಾರ, ಕೊಡಚಾದ್ರಿ ತಾಣ, ನಿಟ್ಟೂರು ಸುತ್ತಲಿನ ಜಲಪಾತಗಳಿಗೆ ಪ್ರವಾಸಿಗರು ಯಾವುದೇ ಅಡೆ ತಡೆಯಿಲ್ಲದೇ ಬಂದು ಹೋಗುತ್ತಿದ್ದಾರೆ. ಆದರೆ ಜೋಗದಲ್ಲಿ ಮಾತ್ರ ಕಠಿಣ ನಿಯಮ ಇದೆ ಎಂದು ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಎಸ್.ಎಲ್. ರಾಜಕುಮಾರ್ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.