ADVERTISEMENT

ಎಲ್ಲ ಸೆಮಿಸ್ಟರ್‌ಗಳಿಗೂ ಕನ್ನಡ ಕಡ್ಡಾಯವಾಗಲಿ

ಕುವೆಂಪು ವಿಶ್ವವಿದ್ಯಾಲಯ ಅಧ್ಯಾಪಕರ ವೇದಿಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 15:17 IST
Last Updated 4 ನವೆಂಬರ್ 2020, 15:17 IST

ಶಿವಮೊಗ್ಗ: ಪದವಿತರಗತಿಗಳ ಎಲ್ಲಸೆಮಿಸ್ಟರ್‌ಗಳಿಗೂಕನ್ನಡ ಭಾಷಾ ವಿಷಯ ಕಡ್ಡಾಯಗೊಳಿಸಬೇಕು ಎಂದು ಕುವೆಂಪು ವಿಶ್ವವಿದ್ಯಾಲಯ ಕನ್ನಡ ಅಧ್ಯಾಪಕರ ವೇದಿಕೆ ಸದಸ್ಯರು ಒತ್ತಾಯಿಸಿದ್ದಾರೆ.

ವಿಶ್ವವಿದ್ಯಾಲಯ ಧನಸಹಾಯ ಆಯೋಗ ಸ್ನಾತಕ ಹಾಗೂ ಸ್ನಾತಕೋತ್ತರ ಹಂತಗಳಲ್ಲಿಸಿಬಿಎಸ್‌ಸಿ(ಆಯ್ಕೆ ಆಧಾರಿತ ಗಳಿಕೆ ಪದ್ಧತಿ) ಅಳವಡಿಸಿಕೊಳ್ಳಲು ಆದೇಶಿಸಿದೆ. ಪ್ರಕ್ರಿಯೆಯೂ ಆರಂಭವಾಗಿದೆ. ಈ ಹೊಸ ಶಿಕ್ಷಣ ಪದ್ಧತಿ ಅಳವಡಿಸಿಕೊಂಡಲ್ಲಿ ಪದವಿ ಹಂತದಲ್ಲಿ ಕನ್ನಡ ಕಲಿಕೆ, ಅಧ್ಯಯನಕ್ಕೆ ತೊಂದರೆಯಾಗುತ್ತದೆ ಎಂದುವೇದಿಕೆಯ ಅಧ್ಯಕ್ಷ ಎಚ್.ಟಿ.ಕೃಷ್ಣಮೂರ್ತಿ, ಕಾರ್ಯದರ್ಶಿ ಡಾ.ಪ್ರಕಾಶ್‌ ದೂರಿದ್ದಾರೆ.

ಈಗಾಗಲೇಶೈಕ್ಷಣಿಕ ವ್ಯವಸ್ಥೆಯಲ್ಲಿ ಮಾತೃಭಾಷೆ, ನಾಡಭಾಷೆಗಳು ಕಡೆಗಣನೆಗೆ ಒಳಗಾಗಿವೆ. ಕನ್ನಡವು ಕ್ರಮೇಣವಾಗಿ ಕಲಿಕೆಯ ಎಲ್ಲಾ ಸಾಧ್ಯತೆಗಳಿಂದ ದೂರ ಸರಿಯುತ್ತಿರುವುದು ಆತಂಕದ ವಿಚಾರ. ಪ್ರಾಥಮಿಕ ಹಂತದಿಂದ ಉನ್ನತ ಶಿಕ್ಷಣದವರೆಗೂ ಕನ್ನಡ ವಜ್ಞೆಗೆ ಒಳಗಾಗುತ್ತಿದೆ ಎಂದುಕಳವಳ ವ್ಯಕ್ತಪಡಿಸಿದ್ದಾರೆ.

ADVERTISEMENT

ರಾಜ್ಯದ ಬೇರೆ ಬೇರೆ ವಿಶ್ವವಿದ್ಯಾಲಯಗಳಲ್ಲಿ ಕನ್ನಡವನ್ನು ಆವಶ್ಯಕ, ಐಚ್ಛಿಕ ವಿಷಯಗಳಾಗಿ ಬೋಧಿಸಲಾಗುತ್ತಿದೆ.ಕನ್ನಡ ಆವಶ್ಯಕ ವಿಷಯದ ಕಾರ್ಯಭಾರ ಕಡಿತಗೊಳಿಸಲಾಗಿದೆ. ಈ ಪದ್ಧತಿ ಜಾರಿಯಾದಲ್ಲಿ ಮೂರು ವರ್ಷಗಳಲ್ಲಿ30 ತಾಸುಗಳ ಬೋಧನಾ ಕಾರ್ಯಭಾರದ ಕೊರತೆ ಎದುರಾಗಲಿದೆ. ಪದವಿ ಹಂತದಲ್ಲಿ ಕನ್ನಡ ಕಡ್ಡಾಯವಾಗಿ ಬೋಧಿಸಬೇಕು ಎಂಬಹಿಂದಿನ ಸರ್ಕಾರದ ಆದೇಶ ಕಡೆಗಣಿಸಿ, ಉನ್ನತ ಶಿಕ್ಷಣ ಪರಿಷತ್ತು ಯಾವ ಭಾಷೆಯನ್ನಾದರೂ ಕಲಿಯಬಹುದು ಎಂದುತಿದ್ದುಪಡಿ ತಂದಿದೆಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡೇತರರಿಗೆ ಕನ್ನಡ ಭಾಷೆ ಕಲಿಸಲು ಕಲಿ-ನಲಿ ಮಾದರಿಯ ಪ್ರಾಥಮಿಕ ಪಠ್ಯಗಳನ್ನು ನಿಗದಿಪಡಿಸಬೇಕು. ಕನಿಷ್ಠ ವಿದ್ಯಾರ್ಥಿಗಳ ಸಂಖ್ಯೆ 5ಕ್ಕೆ ನಿಗದಿಪಡಿಸಬೇಕು.ಪ್ರತಿ ತರಗತಿಯ ವಿದ್ಯಾರ್ಥಿಗಳ ಗರಿಷ್ಠ ಸಂಖ್ಯೆ 40ಕ್ಕೆ ನಿಗದಿಗೊಳಿಸಬೇಕು. ಎಲ್ಲಾ ಪದವಿಗಳಿಗೂ ಹಿಂದಿನ ಪದ್ಧತಿಯಂತೆ ಭಾಷಾ ತರಗತಿಗಳನ್ನು5 ಗಂಟೆ ನಿಗದಿಪಡಿಸಬೇಕು. ಪ್ರತಿ ಪದವಿಗೂ ಪ್ರತ್ಯೇಕ ಕನ್ನಡ ಪಠ್ಯಗಳನ್ನು ನಿಗದಿಗೊಳಿಸಬೇಕು. ಪ್ರತಿ ವಿಶ್ವವಿದ್ಯಾಲಯಗಳೂ ಪ್ರಾದೇಶಿಕ ವೈವಿಧ್ಯತೆಗೆ ಅನುಗುಣವಾಗಿ ಕನ್ನಡ ಪಠ್ಯಗಳನ್ನು ರೂಪಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.