ADVERTISEMENT

ಕಾರ್ಗಲ್: ಶರಾವತಿ ಕೊಳ್ಳದಲ್ಲಿ ರಾಜ್ಯೋತ್ಸವ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2025, 5:19 IST
Last Updated 2 ನವೆಂಬರ್ 2025, 5:19 IST
ಕಾರ್ಗಲ್‌ನ ಶರಾವತಿ ವರ್ತಕರ ಸಂಘದಿಂದ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹಮಾಲಿ ಜಂಗ್ಲಿ ಸಾಬ್‌ ಅವರನ್ನು ಸನ್ಮಾನಿಸಲಾಯಿತು
ಕಾರ್ಗಲ್‌ನ ಶರಾವತಿ ವರ್ತಕರ ಸಂಘದಿಂದ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹಮಾಲಿ ಜಂಗ್ಲಿ ಸಾಬ್‌ ಅವರನ್ನು ಸನ್ಮಾನಿಸಲಾಯಿತು   

ಕಾರ್ಗಲ್: ಶರಾವತಿ ಕೊಳ್ಳದ ಕೇಂದ್ರ ಪ್ರದೇಶವಾದ ಕಾರ್ಗಲ್ ಪಟ್ಟಣದಲ್ಲಿ ಸಂಭ್ರಮದ ಕರ್ನಾಟಕ ರಾಜ್ಯೋತ್ಸವವನ್ನು ಶನಿವಾರ ಆಚರಿಸಲಾಯಿತು.

ಪಟ್ಟಣದ ಕನ್ನಡ ಸಂಘದ ಆವರಣದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯೆ ಶ್ರೀಲತಾ ಧ್ವಜಾರೋಹಣ ನೆರವೇರಿಸಿ ಅಲಂಕೃತ ಭುವನೇಶ್ವರಿ ತಾಯಿಯ ರಥಕ್ಕೆ ಚಾಲನೆ ನೀಡಿದರು.

ಶರಾವತಿ ಗೂಡ್ಸ್ ವಾಹನ ಚಾಲಕರ ಸಂಘದಲ್ಲಿ ಅಧ್ಯಕ್ಷ ಬಾಲು ಧ್ವಜಾರೋಹಣ ನೆರವೇರಿಸಿದರು. ಸಮಾಜ ಸೇವಕ ಜೆ. ಮಾದೇಗೌಡ ಅವರನ್ನು ಸನ್ಮಾನಿಸಲಾಯಿತು. ಜೋಕಾಲಿ ಆಟೊ ಚಾಲಕರ ಸಂಘದ ಆವರಣದಲ್ಲಿ ಅಧ್ಯಕ್ಷ ಜಬೀಉಲ್ಲಾ ಧ್ವಜಾರೋಹಣ ನೆರವೇರಿಸಿ, ಅಂಧ ಶಿಕ್ಷಕ ಜಯಣ್ಣ ಅವರನ್ನು ಸನ್ಮಾನಿಸಿದರು.

ADVERTISEMENT

ಶರಾವತಿ ವರ್ತಕರ ಸಂಘದ ಆವರಣದಲ್ಲಿ ಹಮಾಲಿ ಜಂಗ್ಲಿ ಸಾಬ್ ಅವರು ಧ್ವಜಾರೋಹಣ ನೆರವೇರಿಸಿದರು. ಶರಾವತಿ ವಾಹನ ಚಾಲಕರ ಸಂಘದ ಆವರಣದಲ್ಲಿ ಅಧ್ಯಕ್ಷ ತಂಗರಾಜ್ ಧ್ವಜಾರೋಹಣ ನೆರವೇರಿಸಿದರು.

ಸ್ಥಳೀಯ ಸರ್ಕಾರಿ ಪ್ರೌಢಶಾಲೆ, ಕೆಪಿಸಿ ಆಂಗ್ಲ ಮಾಧ್ಯಮ ಶಾಲೆ, ಸರ್ಕಾರಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ರಾಜ್ಯೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸಿ ನಾಡಹಬ್ಬ ಆಚರಣೆಗೆ ವಿಶೇಷ ಕಳೆಯನ್ನು ನೀಡಿದರು. ಜೋಕಾಲಿ ಆಟೊ ಚಾಲಕರು ವಾದ್ಯ ಗೋಷ್ಠಿಗಳೊಂದಿಗೆ ಭುವನೇಶ್ವರಿ ದೇವಿಯ ಮೆರವಣಿಗೆಯನ್ನು ಆಕರ್ಷಕವಾಗಿ ಸಂಘಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.