ADVERTISEMENT

ಕರ್ಣ ಪರ್ವ ಪೌರಾಣಿಕ ಯಕ್ಷಗಾನ ಪ್ರದರ್ಶನ ನಾಳೆ

-

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 6:35 IST
Last Updated 30 ಜನವರಿ 2026, 6:35 IST
   

ಶಿವಮೊಗ್ಗ: ಇಲ್ಲಿನ ವಿನೋಬನಗರ  ಲಕ್ಷ್ಮೀಪುರ ಬಡಾವಣೆ ನಿವಾಸಿಗಳ ಸಂಘದ ಆಶ್ರಯದಲ್ಲಿ ಜ.31ರಂದು ಸಂಜೆ 5.30ರಿಂದ ವಿದ್ವಾನ್ ದತ್ತಮೂರ್ತಿ ಭಟ್ ಸಂಚಾಲಕತ್ವದ ನಾಟ್ಯಶ್ರೀ ಕಲಾತಂಡ ಮತ್ತು ಸಾಗರದ ಶ್ರೀಗುರು ಯಕ್ಷಗಾನ ಮಂಡಳಿಯಿಂದ ಕರ್ಣ ಪರ್ವ ಪೌರಾಣಿಕ ಯಕ್ಷಗಾನ ಪ್ರದರ್ಶನ ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ರಘುರಾಮ ದೇವಾಡಿಗ, ಎಂ.ಐ.ಭಟ್, ಪ್ರಭಾಕರ ಅವರನ್ನು ಸನ್ಮಾನಿಸಲಾಗುವುದು.

ಲಕ್ಷ್ಮೀಪುರ ಬಡಾವಣೆಯ ಬಲಮುರಿ ಮಹಾಗಣಪತಿ ಹಾಗೂ ಮಹಾಲಕ್ಷ್ಮಿ ನವಗ್ರಹ ದೇವಸ್ಥಾನದ ಆವರಣದಲ್ಲಿ ಯಕ್ಷಗಾನ ಪ್ರದರ್ಶನ ನಡೆಯಲಿದ್ದು ಎಲ್ಲರಿಗೂ ಉಚಿತ ಪ್ರವೇಶವಿದೆ ಎಂದು ವಿದ್ವಾನ್ ದತ್ತಮೂರ್ತಿ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT