ADVERTISEMENT

ಮ್ಯಾಮ್‌ಕೋಸ್ ಚುನಾವಣೆ: ಕಣಕ್ಕೆ ರಾಷ್ಟ್ರೀಯ ಸಹಕಾರ ಪ್ರತಿಷ್ಠಾನ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2020, 11:05 IST
Last Updated 18 ಫೆಬ್ರುವರಿ 2020, 11:05 IST
ಕಿಮ್ಮನೆ ರತ್ನಾಕರ್
ಕಿಮ್ಮನೆ ರತ್ನಾಕರ್   

ಶಿವಮೊಗ್ಗ: ಮಲೆನಾಡು ಅಡಿಕೆ ಮಾರಾಟ ಸಹಕಾರ ಸಂಘಕ್ಕೆಫೆ.22ರಂದು ಚುನಾವಣೆ ನಡೆಯಲಿದೆ.ರಾಷ್ಟ್ರೀಯ ಸಹಕಾರಪ್ರತಿಷ್ಠಾನ 19 ಸ್ಥಾನಗಳಿಗೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರಹೇಳಿದರು.

ಅಡಿಕೆ ಬೆಳೆಗಾರರ ಹಿತಕಾಪಾಡಲು ಸಹಕಾರ ಭಾರತಿ ವಿಫಲವಾಗಿದೆ. ಕೇಂದ್ರಸರ್ಕಾರ ಅಡಿಕೆ ಬೆಳೆಗಾರರ ಸಂಕಷ್ಟಕ್ಕೆಸ್ಪಂದಿಸುತ್ತಿಲ್ಲ.ಕೇಂದ್ರ ಆರೋಗ್ಯ ಸಚಿವರೇಅಧಿವೇಶನದಲ್ಲಿ ಅಡಿಕೆ ಹಾನಿಕರ ಬಳೆ. ಅದರಿಂದಕ್ಯಾನ್ಸರ್ ಬರುತ್ತದೆ ಎಂದುಹೇಳಿಕೆ ನೀಡಿದ್ದರು. ಸಹಕಾರ ಭಾರತಿ ಈ ಹೇಳಿಕೆವಿರೋಧಿಸಲಿಲ್ಲಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

2015-16ನೇ ಸಾಲಿನಲ್ಲಿ ನೆರೆ ಹಾವಳಿಗೆ ಅಡಿಕೆ ಬೆಳೆ ನಾಶವಾಗಿತ್ತು. ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ₨ 86 ಕೋಟಿ ಬಿಡುಗಡೆ ಮಾಡಿದ್ದರು. ತೀರ್ಥಹಳ್ಳಿ ತಾಲ್ಲೂಕಿಗೆ ₨ 15 ಕೋಟಿ ಬಿಡುಗಡೆಯಾಗಿತ್ತು. ಈಗಿನ ಸರ್ಕಾರ ಅಡಿಕೆ ಬೆಳೆಗಾರರಿಗೆ ಸ್ಪಂದಿಸುತ್ತಿಲ್ಲ.ರೈತ ವಿರೋಧಿ ನೀತಿ ತಾಳಿದೆ. ರೈತರ ಯಂತ್ರೋಪಕರಣಗಳಿಗೆ ನೀಡುತ್ತಿದ್ದ ಸಬ್ಸಿಡಿಯನ್ನೂ ರದ್ದುಮಾಡಿದೆ. ಸಿದ್ದರಾಮಯ್ಯ ಸರ್ಕಾರ ₨ 10,600 ಕೋಟಿ ರೈತರ ಬಡ್ಡಿಸಾಲ ಮನ್ನಾಮಾಡಿತ್ತು.ಇದರಿಂದ 22 ಲಕ್ಷ ರೈತರಿಗೆ ಅನುಕೂಲವಾಗಿದೆ ಎಂದರು.

ADVERTISEMENT

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಘಟಕದ ಅಧ್ಯಕ್ಷ ಎಚ್.ಎಸ್.ಸುಂದರೇಶ್,ಜಿಲ್ಲಾ ಪಂಚಾಯಿತಿಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಸದಸ್ಯ ಕಲಗೋಡು ರತ್ನಾಕರ್, ಜಿಡಿಎಸ್ ಜಿಲ್ಲಾ ಘಟಕದ ಉಪಾಧ್ಯಕ್ಷ ಕಡಿದಾಳು ಗೋಪಾಲ್ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.