ADVERTISEMENT

ಅಶೋಕ ಪರ ಪ್ರಗತಿಪರ ಹೋರಾಟಗಾರರ ಧ್ವನಿ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2020, 15:22 IST
Last Updated 10 ಸೆಪ್ಟೆಂಬರ್ 2020, 15:22 IST
ಶಿವಮೊಗ್ಗದಲ್ಲಿ ಗುರುವಾರ ಪ್ರಗತಿಪರ ಸಂಘಟನೆಗಳ ಮುಖಂಡರು ಕೊಪ್ಪ ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ಶಿವಮೊಗ್ಗದಲ್ಲಿ ಗುರುವಾರ ಪ್ರಗತಿಪರ ಸಂಘಟನೆಗಳ ಮುಖಂಡರು ಕೊಪ್ಪ ಪೊಲೀಸರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.   

ಶಿವಮೊಗ್ಗ: ಹೋರಾಟಗಾರ ಕೆ.ಎಲ್.ಅಶೋಕ್ ಅವರನ್ನು ನಿಂದಿಸಿ, ಕಿರುಕುಳ ನೀಡಿದ ಪೊಲೀಸರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ಒಕ್ಕೂಟದಸದಸ್ಯರುಗುರುವಾರಜಿಲ್ಲಾಧಿಕಾರಿ ಕಚೇರಿಮುಂದೆಪ್ರತಿಭಟನೆ ನಡೆಸಿದರು.

ಕೆಲವು ಅಧಿಕಾರಿಗಳು ಅಧಿಕಾರ ದುರುಪಯೋಗ ಮಾಡಿಕೊಂಡು ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಘಟನೆಗಳು ಹೆಚ್ಚಾಗುತ್ತಿದೆ.ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿಪಾರ್ಕಿಂಗ್ ವಿಚಾರಕ್ಕೆ ಹೋರಾಟಗಾರ ಕೆ.ಎಲ್.ಅಶೋಕ್ ಅವರನ್ನು ನಿಂದಿಸಿ, ಅವಮಾನ ಮಾಡಲಾಗಿದೆ. ಪೊಲೀಸರ ಇಂತಹ ನಡೆಖಂಡನೀಯ ಎಂದರು.

ಚಿಕ್ಕಮಗಳೂರು ಜಿಲ್ಲೆ ಕೊಪ್ಪ ಠಾಣೆಯ ಉಪ ಆರಕ್ಷಕ ನಿರೀಕ್ಷಕ ರವಿ ಮತ್ತು ಪೊಲೀಸ್ ಆರ್.ರಮೇಶ್ ಉದ್ದೇಶಪೂರ್ವಕವಾಗಿ ಕೆ.ಎಲ್.ಅಶೋಕ್ ಅವರನ್ನು ಅವಮಾನ ಮಾಡಿ ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದಾರೆ. ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಸೆ.7ರಂದು ಕುಟುಂಬ ಸಮೇತ ವೈಯಕ್ತಿಕ ಕಾರಣಕ್ಕೆ ಕೊಪ್ಪಕ್ಕೆ ಭೇಟಿ ನೀಡಿದ್ದರು. ಕಾರು ಸರಿಯಾಗಿ ಪಾರ್ಕ್ ಮಾಡಿಲ್ಲ ಎಂಬುದನ್ನೇ ನೆಪ ಮಾಡಿಕೊಂಡು ಅವಮಾನ ಮಾಡಲಾಗಿದೆ. ಅಶೋಕ್ ಅವರೇಚಾಲಕನಸೀಟ್‌ನಲ್ಲಿ ಕುಳಿತಿದ್ದರು. ಪಾರ್ಕಿಂಗ್ ಅಲ್ಲದ ಸ್ಥಳದಲ್ಲಿ ಕಾರು ನಿಲ್ಲಿಸಿದ್ದಕ್ಕೆ ದಂಡ ಕಟ್ಟಲು ಮುಂದಾದರೂ ಅದಕ್ಕೆ ಅವಕಾಶನೀಡಿಲ್ಲ.ಠಾಣೆಗೆ ಕರೆದುಕೊಂಡು ಹೋಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅವಮಾನ ಮಾಡಿದ್ದಾರೆ ಎಂದು ದೂರಿದರು.

ರಾಜ್ಯದಲ್ಲಿ ಕೋಮುಸೌಹಾರ್ದಕ್ಕಾಗಿ 26ವರ್ಷಗಳಿಂದ ಶ್ರಮಿಸಿದ್ದಾರೆ. ಸಮಾಜಕ್ಕಾಗಿ ಜೀವನ ಮುಡುಪಿಟ್ಟಿದ್ದಾರೆ. ಅವರಿಗೆ ಆದ ಅಪಮಾನಇಡೀ ಸಮಾಜಕ್ಕೆ ಮಾಡಿದಂತೆ.ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.ತಪ್ಪಿತಸ್ಥ ಅಧಿಕಾರಿಗಳ ವಿರುದ್ಧಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ವಿವಿಧ ಸಂಘಟನೆಗಳಮುಖಂಡರಾದಕೆ.ಪಿ.ಶ್ರೀಪಾಲ್, ಅಶೋಕ್ ಯಾದವ್, ಆರ್.ಕುಮಾರ್, ಅನನ್ಯ ಶಿವು, ಹೊನ್ನಾಳಿ ಚಂದ್ರಶೇಖರ್, ವಿಶ್ವನಾಥ್‌, ಬಾಲಣ್ಣ, ರಾಜೇಂದ್ರ, ಚಿನ್ನಯ್ಯ ಪ್ರತಿಭಟನೆಯ ನೇತೃತ್ವದಲ್ಲಿ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.