ಕುಂಸಿ: ಶಾರ್ಟ್ ಸರ್ಕೀಟ್‌ನಿಂದ ಹಾರ್ಡ್‌ವೇರ್ ಅಂಗಡಿಗೆ ಬೆಂಕಿ ತಗುಲಿ ನಗದು ಹಾಗೂ ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಗ್ರಿಗಳು ಸುಟ್ಟಿರುವ ಘಟನೆ ಸಮೀಪದ ಆಯನೂರಿನಲ್ಲಿ ಮಂಗಳವಾರ ನಡೆದಿದೆ.
ಆರ್.ವಿ ಟ್ರೇಡರ್ಸ್ ಅಂಗಡಿಗೆ ಹೊತ್ತಿದ್ದ ಬೆಂಕಿಯನ್ನು ಅಗ್ನಿಶಾಮಕ ಸಿಬ್ಬಂದಿ ನಂದಿಸಿದರು. ಈ ಅಂಗಡಿ ಹರೀಶ್ ಬಾಬು ಅವರಿಗೆ ಸೇರಿದೆ. ನಾಲ್ಕು ಲಕ್ಷ ರೂ. ನಗದು ಹಾಗೂ ಕಂಪ್ಯೂಟರ್, ಎಸಿ, ಫ್ರಿಡ್ಜ್, ಸಿಸಿಟಿವಿ ಕ್ಯಾಮೆರಾ, ಸಿಮೆಂಟ್ ಇನ್ನಿತರೆ ವಸ್ತುಗಳು ಸುಟ್ಟಿದ್ದು, ಅಂದಾಜು ₹30 ಲಕ್ಷ ನಷ್ಟ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.