ADVERTISEMENT

ಕೆರೆ ಒತ್ತುವರಿ ತೆರವು ವೇಳೆ ವಿಷ ಕುಡಿಯುವ ನಾಟಕ

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 4:36 IST
Last Updated 22 ಜುಲೈ 2021, 4:36 IST
ಭದ್ರಾವತಿ ತಾಲ್ಲೂಕು ಅಗಸವಳ್ಳಿ ಕೆರೆ ಒತ್ತುವರಿ ಮಾಡಿ ಮನೆಕಟ್ಟಿರುವುದು.
ಭದ್ರಾವತಿ ತಾಲ್ಲೂಕು ಅಗಸವಳ್ಳಿ ಕೆರೆ ಒತ್ತುವರಿ ಮಾಡಿ ಮನೆಕಟ್ಟಿರುವುದು.   

ಶಿವಮೊಗ್ಗ: ಭದ್ರಾವತಿ ತಾಲ್ಲೂಕು ಅಗಸವಳ್ಳಿ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಸಮಯದಲ್ಲಿ ಕುಟುಂಬವೊಂದು ವಿಷ ಕುಡಿಯುವ ನಾಟಕವಾಡಿದ ಪರಿಣಾಮ ಅಧಿಕಾರಿಗಳು ವಾಪಸ್ ಹೋಗಿದ್ದಾರೆ.

ಅಗಸವಳ್ಳಿ ಶ್ರೀಮಠದ ಕೆರೆ ಜಾಗವನ್ನು ಈರೇಗೌಡ ಕುಟುಂಬ ಒತ್ತುವರಿ ಮಾಡಿದ್ದಾರೆ ಎಂದು ಗ್ರಾಮಸ್ಥರ ದೂರಿನ ಕಾರಣ ಉಪ ವಿಭಾಗಾಧಿಕಾರಿ ಟಿ.ವಿ.ಪ್ರಕಾಶ್, ತಹಶೀಲ್ದಾರ್ ನಾಗರಾಜ್ ನೇತೃತ್ವದ ತಂಡ ಕೆರೆ ಒತ್ತುವರಿ ತೆರವಿಗೆ ಸ್ಥಳಕ್ಕೆ ಧಾವಿಸಿತ್ತು. ಈ ಸಮಯದಲ್ಲಿಈರೇಗೌಡ ಕುಟುಂಬದ ಸದಸ್ಯರು ವಿಷ ಕುಡಿಯಲು ಮುಂದಾದರು. ಕೀಟನಾಶಕ ಕೈಗೆತ್ತಿಕೊಂಡು ಇಡೀ ವಾತಾವರಣ ಗಲಿಬಿಲಿಗೊಳಿಸಿದರು. ತಕ್ಷಣ ಎಚ್ಚೆತ್ತ ಕಂದಾಯ ಇಲಾಖೆ ಸಿಬ್ಬಂದಿ, ಪೊಲೀಸರು ಹಾಗೂ ಸ್ಥಳೀಯರು ವಿಷ ಕಸಿದುಕೊಂಡು ಎಸೆದರು.

‘ಅಗಸವಳ್ಳಿಯ ಸರ್ವೆ ನಂಬರ್ 66ರಲ್ಲಿ 27 ಗುಂಟೆ ಕೆರೆ ಜಾಗ ಒತ್ತುವರಿ ಮಾಡಲಾಗಿದೆ. ಗ್ರಾಮ ಪಂಚಾಯಿತಿ ಅನುಮತಿ ಪಡೆಯದೆ, ಕೆರೆ ಜಾಗ ಒತ್ತುವರಿ ಮಾಡಿ ಮನೆ ನಿರ್ಮಾಣ ಮಾಡಿರುವುದು ಅಪರಾಧ. ಐದು ದಿನಗಳು ಅವಕಾಶ ನೀಡಲಾಗಿದೆ. ಅಷ್ಟರಲ್ಲಿ ಮನೆ ತೆರವು ಮಾಡಲು ಗಡುವು ನೀಡಲಾಗಿದೆ’ ಎಂದು ತಹಶೀಲ್ದಾರ್ ನಾಗರಾಜ್‌ ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.