ADVERTISEMENT

ಲಾಂಚ್ ಸೇವೆಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿ: ಪ್ರದೀಪ್ ಮಾವಿನಕೈ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2021, 4:09 IST
Last Updated 8 ಸೆಪ್ಟೆಂಬರ್ 2021, 4:09 IST
ಸಾಗರ ತಾಲ್ಲೂಕಿನ ಅಂಬಾರಗೋಡ್ಲು–ಕಳಸವಳ್ಳಿ ನಡುವಿನ ಶರಾವತಿ ಹಿನ್ನೀರಿನಲ್ಲಿ ಸಂಚರಿಸುವ ಲಾಂಚ್‌ನಲ್ಲಿರುವ ಪ್ರಯಾಣಿಕರ ದಟ್ಟಣೆ (ಸಂಗ್ರಹ ಚಿತ್ರ)
ಸಾಗರ ತಾಲ್ಲೂಕಿನ ಅಂಬಾರಗೋಡ್ಲು–ಕಳಸವಳ್ಳಿ ನಡುವಿನ ಶರಾವತಿ ಹಿನ್ನೀರಿನಲ್ಲಿ ಸಂಚರಿಸುವ ಲಾಂಚ್‌ನಲ್ಲಿರುವ ಪ್ರಯಾಣಿಕರ ದಟ್ಟಣೆ (ಸಂಗ್ರಹ ಚಿತ್ರ)   

ಸಾಗರ: ತಾಲ್ಲೂಕಿನ ಅಂಬಾರಗೋಡ್ಲು–ಕಳಸವಳ್ಳಿ ನಡುವಿನ ಶರಾವತಿ ಹಿನ್ನೀರಿನಲ್ಲಿ ಸಂಚರಿಸುವ ಲಾಂಚ್‌ನಲ್ಲಿ ಸ್ಥಳೀಯ ಪ್ರಯಾಣಿಕರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಜನಪರ ಹೋರಾಟ ವೇದಿಕೆಯ ಮುಖಂಡ ಪ್ರದೀಪ್ ಮಾವಿನಕೈ ಒತ್ತಾಯಿಸಿದ್ದಾರೆ.

ಈ ಭಾಗದಲ್ಲಿ ಲಾಂಚ್ ಸೌಲಭ್ಯ ಆರಂಭವಾಗಿರುವುದೇ ಸ್ಥಳೀಯರ ಅನುಕೂಲಕ್ಕಾಗಿ. ಆದರೆ, ಇತ್ತೀಚಿನ ವರ್ಷಗಳಲ್ಲಿ ಈ ಭಾಗದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದ್ದು, ಸ್ಥಳೀಯರು ಓಡಾಡುವುದೇ ಕಷ್ಟವಾಗಿದೆ. ಲಾಂಚ್ ಸಿಬ್ಬಂದಿ ಸ್ಥಳೀಯರಿಗೆ ಆದ್ಯತೆ ನೀಡುವ ಬದಲು ಪ್ರವಾಸಿಗರಿಗೆ ಅನು ಕೂಲ ಮಾಡಿಕೊಡುತ್ತಿದ್ದಾರೆ. ಈ ಕಾರಣ ಕ್ಕೆ ಅನೇಕ ಬಾರಿ ಸ್ಥಳೀಯರು, ಪ್ರವಾಸಿ ಗರು, ಲಾಂಚ್ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ ಎಂದು ಹೇಳಿಕೆ ನೀಡಿದ್ದಾರೆ.

ಈಚೆಗೆ ಸ್ಥಳೀಯ ಬಾಣಂತಿ ಯೊಬ್ಬರು ಇದ್ದ ವಾಹನಕ್ಕೆ ಅವಕಾಶ ನೀಡದೆ ಪ್ರವಾಸಿಗರ ವಾಹನಕ್ಕೆ ಅವಕಾಶ ನೀಡುವ ಮೂಲಕ ಲಾಂಚ್ ಸಿಬ್ಬಂದಿ ತಾರತಮ್ಯ ಧೋರಣೆ ತೋರಿದ್ದಾರೆ. ಈ ಅವ್ಯವಸ್ಥೆಯನ್ನು ತಾಲ್ಲೂಕು ಆಡಳಿತ ಕೂಡಲೇ ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.