ADVERTISEMENT

ನೌಕರರ ಬೇಡಿಕೆಗೆ ಸರ್ಕಾರ ಸ್ಪಂದಿಸಲಿ

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 2:09 IST
Last Updated 3 ಜುಲೈ 2022, 2:09 IST
ಸಾಗರದಲ್ಲಿ ಸೇವೆಯನ್ನು ಕಾಯಂಗೊಳಿಸುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿಯ ಮುಷ್ಕರ ಕೈಗೊಂಡಿರುವ ನಗರಸಭೆಯ ಹೊರಗುತ್ತಿಗೆ ನೌಕರರನ್ನು ಶನಿವಾರ ಭೇಟಿ ಮಾಡಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮುಷ್ಕರಕ್ಕೆ ಬೆಂಬಲ ಸೂಚಿಸಿದರು
ಸಾಗರದಲ್ಲಿ ಸೇವೆಯನ್ನು ಕಾಯಂಗೊಳಿಸುವಂತೆ ಒತ್ತಾಯಿಸಿ ಅನಿರ್ದಿಷ್ಟಾವಧಿಯ ಮುಷ್ಕರ ಕೈಗೊಂಡಿರುವ ನಗರಸಭೆಯ ಹೊರಗುತ್ತಿಗೆ ನೌಕರರನ್ನು ಶನಿವಾರ ಭೇಟಿ ಮಾಡಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಮುಷ್ಕರಕ್ಕೆ ಬೆಂಬಲ ಸೂಚಿಸಿದರು   

ಸಾಗರ: ನಗರಸಭೆಯ ಹೊರಗುತ್ತಿಗೆ ನೌಕರರು ತಮ್ಮ ಸೇವೆಯನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿ ಇಟ್ಟಿರುವ ಬೇಡಿಕೆ ನ್ಯಾಯಯುತವಾಗಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.

ಸೇವೆಯನ್ನು ಕಾಯಂಗೊಳಿಸುವಂತೆ ಒತ್ತಾಯಿಸಿ ಮುಷ್ಕರ ಕೈಗೊಂಡಿರುವ ನಗರಸಭೆಯ ಹೊರ ಗುತ್ತಿಗೆ ನೌಕರರನ್ನು ಶನಿವಾರ ಭೇಟಿ ಮಾಡಿ ಮುಷ್ಕರಕ್ಕೆ ಬೆಂಬಲ ಸೂಚಿಸಿ ಅವರು ಮಾತನಾಡಿದರು.

ಹೊರ ಗುತ್ತಿಗೆ ನೌಕರರು ದೀರ್ಘಕಾಲದಿಂದ ಅತ್ಯಂತ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಈಗಲಾದರೂ ಅವರ ಬೇಡಿಕೆಗಳಿಗೆ ಸ್ಪಂದಿಸಬೇಕು. ಆ ಮೂಲಕ ನೌಕರರ ಕಷ್ಟಗಳಿಗೆ ಧ್ವನಿಯಾಗಬೇಕು ಎಂದರು.

ADVERTISEMENT

‘ಹಲವು ವರ್ಷಗಳಿಂದ ಸೇವೆ ಕಾಯಂಗೊಳಿಸುವಂತೆ ಬೇಡಿಕೆ ಮಂಡಿಸುತ್ತಿರುವ ಹೊರ ಗುತ್ತಿಗೆ ನೌಕರರನ್ನು ಸರ್ಕಾರ ನಿರ್ಲಕ್ಷ್ಯ ಮಾಡುವುದು ಸರಿಯಲ್ಲ’ ಎಂದುಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ತೀ.ನ. ಶ್ರೀನಿವಾಸ್ ಹೇಳಿದರು.

ನಗರಸಭೆ ಸದಸ್ಯೆ ಮಧು ಮಾಲತಿ, ಮಾಜಿ ಸದಸ್ಯ ಡಿ. ದಿನೇಶ್, ನೌಕರರ ಸಂಘದ ಪ್ರಮುಖರಾದ ಕಾಮರಾಜ್, ತಂಗರಾಜ್, ಎಂ.ನಾಗರಾಜ್, ದೇವರಾಜ್, ವೀರಾ, ಸಿ.ಮೂರ್ತಿ, ಆನಂದ ಬಾಳೆಕೊಪ್ಪ, ಚೆಲುವಿ, ಸುರೇಶ್, ಸುಲೋಚನಾ, ಮುರುಗೇಶ್, ಸತೀಶ್, ರಾಘವೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.