ADVERTISEMENT

225 ಕೆರೆಗಳ ಒಡಲು ತಂಬಿಸಲಿರುವ ತುಂಗಭದ್ರೆ: ಬಿ.ವೈ.ರಾಘವೇಂದ್ರ

​ಪ್ರಜಾವಾಣಿ ವಾರ್ತೆ
Published 29 ಜೂನ್ 2020, 13:38 IST
Last Updated 29 ಜೂನ್ 2020, 13:38 IST
ಶಿಕಾರಿಪುರ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಚಟ್ನಹಳ್ಳಿ ಪುರದಕೆರೆ ಏತನೀರಾವರಿ ಯೋಜನೆ ಕಾಮಗಾರಿಗಳನ್ನು ಸೋಮವಾರ ಸಂಸದ ಬಿ.ವೈ.ರಾಘವೇಂದ್ರ ವೀಕ್ಷಿಸಿದರು.
ಶಿಕಾರಿಪುರ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವ ಚಟ್ನಹಳ್ಳಿ ಪುರದಕೆರೆ ಏತನೀರಾವರಿ ಯೋಜನೆ ಕಾಮಗಾರಿಗಳನ್ನು ಸೋಮವಾರ ಸಂಸದ ಬಿ.ವೈ.ರಾಘವೇಂದ್ರ ವೀಕ್ಷಿಸಿದರು.   

ಶಿವಮೊಗ್ಗ: ಶಿಕಾರಿಪುರ ತಾಲ್ಲೂಕಿನ ಉಡುಗಣಿ, ತಾಳಗುಂದ, ಹೊಸೂರು ಹೋಬಳಿಗಳ 225 ಕೆರೆಗಳಿಗೆ ನೀರು ತುಂಬಿಸುವ ₨ 850 ಕೋಟಿ ವೆಚ್ಚದ ಪುರದಕೆರೆ ಏತ ನೀರಾವರಿ ಯೋಜನೆ ಒಂದು ವರ್ಷದ ಒಳಗೆ ಪೂರ್ಣಗೊಳ್ಳಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ವಿಶ್ವಾಸ ವ್ಯಕ್ತಪಡಿಸಿದರು.

ಹಾವೇರಿ ಜಿಲ್ಲೆ ಚಟ್ನಹಳ್ಳಿ ಪುರದಕೆರೆ ಬಳಿ ಸೋಮವಾರ ತುಂಗಭದ್ರಾ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆ ಕಾಮಗಾರಿ ವೀಕ್ಷಿಸಿದ ನಂತರ ಸುದ್ದಿಗಾರರ ಜತೆಅವರು ಮಾತನಾಡಿದರು.

ಮಳೆಗಾಲದ ಅವಧಿಯಲ್ಲಿ ನದಿಯಿಂದ 1.5 ಟಿಎಂಸಿ ಅಡಿ ನೀರು ಪಂಪ್‌ ಮಾಡುವ ಮೂಲಕ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. 5ಅಡಿವ್ಯಾಸದ ಕಬ್ಬಿಣ, ಸಿಮೆಂಟ್‌ ಕೊಳವೆಯ ಮೂಲಕ 45 ಕಿ.ಮೀ. ನೀರು ಹರಿಯುತ್ತದೆ. ನಂತರ ಅಲ್ಲಿಂದ ಕೆರೆಗಳಿಗೆ ಜಾಕ್‌ವೆಲ್‌ಗಳ ಮೂಲಕ ನೀರು ಹರಿಸುವ ಪ್ರಕ್ರಿಯೆಯ ಕಾಮಗಾರಿಗಳು ನಡೆಯಲಿವೆ. ಚಟ್ನಹಳ್ಳಿನದಿ ತಟದಲ್ಲಿಮೂರು ಮೀಟರ್ ಎತ್ತರದ ಚೆಕ್‌ಡ್ಯಾಂ ನಿರ್ಮಿಸಲಾಗುತ್ತಿದೆ. ಅಲ್ಲಿ ಅಳವಡಿಸುವ 5 ಸಾವಿರ ಎಚ್‌.ಪಿ ಮೋಟಾರ್‌ಗಳಿಗೆ 110 ಕೆ.ವಿ. ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. ಯೋಜನೆಯ ಪರಿಣಾಮ ಕೆರೆಗಳು ಸದಾ ತುಂಬಿರುತ್ತವೆ.ಅಂತರ್ಜಲ ಹೆಚ್ಚಳದ ಪರಿಣಾಮ 7 ಸಾವಿರ ಹೆಕ್ಟೇರ್ ಪ್ರದೇಶ ಹಸಿರು ಮಯವಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ADVERTISEMENT

ಪುರದಕೆರೆ ಏತ ನೀರಾವರಿ ಯೋಜನೆಯ ಜತೆಗೆ, ಜಿಲ್ಲೆಯ ಸೊರಬ ತಾಲ್ಲೂಕಿನ ಮೂಡಿ, ಮೂಗೂರು ಏತ ನೀರಾವರಿ, ಕಸಬಾ, ಕಚವಿ ಏತ ನೀರಾವರಿ ಸೇರಿ ಒಂದು ಸಾವಿರ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಒಟ್ಟು 1,500 ಕೋಟಿ ವಿನಿಯೋಗಿಸಲಾಗುತ್ತಿದೆ.ಪುರದಕೆರೆಯ ಒಂದನೇ ಮಾರ್ಗ ಹಸೂರು ಹೋಬಳಿ ಕಾಗಿನಲ್ಲಿಯವರೆಗೆ ಸಾಗಲಿದೆ.ಮತ್ತೊಂದು ಮಾರ್ಗ ಶಿಕಾರಿಪುರತಾಲ್ಲೂಕಿಗೆ ನೀರು ಹರಿಸಲಿದೆ. ಬರಡು ಭೂಮಿಗೂ ನೀರುಹರಿಸುವಸಂಕಲ್ಪ ಮಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆಧುನಿಕ ಭಗೀರಥ ಎಂದು ಬಣ್ಣಿಸಿದರು.

ಶಿಕಾರಿಪುರ ತಾಲ್ಲೂಕಿನಹಲವುಗ್ರಾಮಗಳುಸಾಕಷ್ಟು ಬಾರಿ ಬರಗಾಲಕ್ಕೆ ತುತ್ತಾಗಿವೆ. ಏತ ನೀರಾವರಿ ಮೂಲಕ ಮಳೆಗಾಲದಲ್ಲಿ ತುಂಗಭದ್ರ ನದಿಯ ಹೆಚ್ಚುವರಿ ನೀರುಸದ್ವಳಕೆಯಾಗಲಿದೆ. ಹಾಗೆಯೇ, ಜಿಲ್ಲೆಯ ಹೊಸಹಳ್ಖಿ ಏತನೀರಾವರಿ ಯೋಜನೆ ಮೂಲಕ ಕುಂಸಿ, ಹಾರನಹಳ್ಳಿ,ಆಯನೂರು ಹಾಗೂ ಶಿಕಾರಿಪುರ ತಾಲ್ಲೂಕಿನಅಂಜನಾಪುರ ಜಲಾಶಯಕ್ಕೆ ತಲಾ ಅರ್ಧ ಟಿಎಂಸಿ ಅಡಿ ನೀರು ಒದಗಿಸಲಾಗುವುದು. ಹಿರೇಕೆರೂರು ತಾಲ್ಲೂಕಿನಸರ್ವಜ್ಞ ಏತನೀರಾವರಿ ಯೋಜನೆ, ದಾವಣಗೆರೆ ಜಿಲ್ಲೆ ಭರಮಸಾಗರ, ಜಗಳೂರುಏತನೀರಾವರಿ ಯೋಜನೆಗೂ ಅನುದಾನ ನೀಡಲಾಗಿದೆ ಎಂದು ವಿವರ ನೀಡಿದರು.

ಕೃಷಿ ಸಚಿವ ಬಿ.ಸಿ.ಪಾಟೀಲ್, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಮುಖ್ಯಮಂತ್ರಿಗಳ ಉಪ ಕಾರ್ಯದರ್ಶಿ ಎ.ಆರ್.ರವಿ, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ರೇವಣ್ಣಪ್ಪ, ಜ್ಯೋತಿ ಪ್ರಕಾಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.