ಶಿವಮೊಗ್ಗ: 595 ಮೀಟರ್ ನೀರು ಸಂಗ್ರಹ ಸಾಮರ್ಥ್ಯದ ಹೊಸನಗರ ತಾಲ್ಲೂಕಿನ ಮಾಣಿ ಜಲಾಶಯದಲ್ಲಿ ಜೂನ್ 30ಕ್ಕೆ ಇದೇ ಮೊದಲ ಬಾರಿಗೆ 583.22 ಮೀಟರ್ ನೀರು ಸಂಗ್ರಹಗೊಂಡು ಹೊಸ ದಾಖಲೆ ಬರೆದಿದೆ ಎಂದು ಮೂಲಗಳು ತಿಳಿಸಿವೆ.
ಮಾಣಿ ಜಲಾಶಯ 1993ರಲ್ಲಿ ನಿರ್ಮಾಣವಾಗಿದೆ. ವಾರಾಹಿ ಯೋಜನಾ ಪ್ರದೇಶದ ವ್ಯಾಪ್ತಿಯ ಮಾಣಿ ಜಲಾಶಯದ ನೀರು ವಿದ್ಯುತ್ ಉತ್ಪಾದನೆಯ ಜೊತೆಗೆ ಉಡುಪಿ ಜಿಲ್ಲೆಯಲ್ಲಿ ನೀರಾವರಿ ಉದ್ದೇಶಕ್ಕೂ ಬಳಕೆಯಾಗುತ್ತದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದಲ್ಲಿ 572.58 ಮೀಟರ್ ನೀರಿನ ಸಂಗ್ರಹವಿತ್ತು. ಜುಲೈ 4ರಂದು ಜಲಾಶಯದಲ್ಲಿ 584.44 ಮೀಟರ್ ನೀರಿನ ಸಂಗ್ರಹವಿದೆ. ಮಾಣಿ ಜಲಾನಯನ ಪ್ರದೇಶದ ಹುಲಿಕಲ್‌ನಲ್ಲಿ ಜುಲೈ 4ರವರೆಗೆ ಜಿಲ್ಲೆಯಲ್ಲಿಯೇ ಅತಿಹೆಚ್ಚು 257.9 ಸೆಂ.ಮೀ ಹಾಗೂ ಮಾಣಿಯಲ್ಲಿ 232.8 ಸೆಂ.ಮೀ ಮಳೆ ಬಿದ್ದಿದೆ. ಕಳೆದ ವರ್ಷ ಇದೇ ಅವಧಿಯವರೆಗೆ ಹುಲಿಕಲ್‌ನಲ್ಲಿ 190.2 ಸೆಂ.ಮೀ ಹಾಗೂ ಮಾಣಿಯಲ್ಲಿ 156.1 ಸೆಂ.ಮೀ ಮಳೆ ಬಿದ್ದಿತ್ತು.
Highlights - ಮೂರು ಜಲವಿದ್ಯುತ್ ಯೋಜನೆಗಳಿಗೆ ಮಾಣಿ ನೀರು ಬಳಕೆ ಅತ್ಯಂತ ಆಳವಾದ ಜಲಾಶಯ ಎಂಬ ಶ್ರೇಯ ಮಾಣಿ ಜಲಾನಯನ ಪ್ರದೇಶ: ಜಿಲ್ಲೆಯಲ್ಲೇ ಹೆಚ್ಚು ಮಳೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.