ADVERTISEMENT

ಮಡಿವಾಳ ಸಮುದಾಯ ಎಸ್‌ಸಿಗೆ ಸೇರಿಸಿ: ಹನುಮಂತಪ್ಪ ಹೊಸಳ್ಳಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2022, 3:23 IST
Last Updated 2 ಫೆಬ್ರುವರಿ 2022, 3:23 IST
ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಒತ್ತಾಯಿಸಿ ಆನವಟ್ಟಿ ಶಿವಶರಣ ಮಡಿವಾಳ ಮಾಚಿದೇವ ಸಂಘದ ಪದಾಧಿಕಾರಿಗಳು ನಾಡ ಕಚೇರಿಗೆ ತೆರಳಿ ಉಪತಹಶೀಲ್ದಾರ್‌ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಮಡಿವಾಳ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಒತ್ತಾಯಿಸಿ ಆನವಟ್ಟಿ ಶಿವಶರಣ ಮಡಿವಾಳ ಮಾಚಿದೇವ ಸಂಘದ ಪದಾಧಿಕಾರಿಗಳು ನಾಡ ಕಚೇರಿಗೆ ತೆರಳಿ ಉಪತಹಶೀಲ್ದಾರ್‌ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.   

ಆನವಟ್ಟಿ: ಪೊರಕೆಯಿಂದ ಮಲ, ಮೂತ್ರ ತೊಳೆಯುವವರು ಪರಿಶಿಷ್ಟ ಜಾತಿಯಲ್ಲಿದ್ದಾರೆ. ಆದರೆ, ಕೈಯಿಂದ ಮಲ ಮೂತ್ರ ತೊಳೆಯುವ ಮಡಿವಾಳರನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಸರ್ಕಾರ ಮೀನಮೇಷ ಎಣಿಸುತ್ತಿರುವುದು ಸರಿಯಲ್ಲ ಎಂದು ಆನವಟ್ಟಿ ಶಿವಶರಣ ಮಡಿವಾಳ ಮಾಚಿದೇವ ಸಂಘದ ಅಧ್ಯಕ್ಷ ಹನುಮಂತಪ್ಪ ಹೊಸಳ್ಳಿ ಬೇಸರ ವ್ಯಕ್ತಪಡಿಸಿದರು.

ಚಿತ್ರದುರ್ಗದ ಬಸವ ಮಾಚಿದೇವ ಸ್ವಾಮೀಜಿ ಅವರು ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿ ಸೇರಿಸಲು ಸರ್ಕಾರವನ್ನು ಒತ್ತಾಯಿಸಲು ಹಮ್ಮಿಕೊಂಡಿರುವ ಹೋರಾಟಕ್ಕೆ ಬೆಂಬಲವಾಗಿ ಇಲ್ಲಿನ ಮಡಿವಾಳ ಸಮುದಾಯದವರು ಆನವಟ್ಟಿಯ ನಾಡ ಕಚೇರಿಗೆ ತರಳಿ ಉಪ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಊರ ಹೊರಗಿದ್ದು ಅನುಭವಿಸುವ ಮಾನಸಿಕ ಕೀಳರಿಮೆಗಿಂತಲೂ,
ಊರ ಒಳಗಿದ್ದು ಅನುಭವಿಸುವ ಅಸ್ಪೃಶ್ಯತೆಯ ಯಾತನೆ ತೀವ್ರವಾದುದು. ಪ್ರೊ.ಅನ್ನಪೂರ್ಣಮ್ಮ ಅವರು 2010ರಲ್ಲಿ ಕುಲಶಾಸ್ತ್ರೀಯ ಅಧ್ಯಯನ ವರದಿ ಸಲ್ಲಿಸಿದ್ದು, ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸುವಂತೆ ಶಿಫಾರಸು ಮಾಡಿದ್ದಾರೆ. 18 ರಾಜ್ಯ ಹಾಗೂ 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಡಿವಾಳರಿಗೆ ಪರಿಶಿಷ್ಟ ಜಾತಿ ಮಾನ್ಯತೆ ಇದೆ. ಆದರೆ, ಕರ್ನಾಟಕದಲ್ಲಿ ಏಕೆ ಇಲ್ಲ ಎಂದು ಪ್ರಶ್ನಿಸಿದರು.

ADVERTISEMENT

ರಾಜಕೀಯ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿದಿರುವ ಮಡಿವಾಳ ಸಮಾಜವನ್ನು ಕೂಡಲೇ ಪರಿಶಿಷ್ಟ ಜಾತಿಗೆ ಸೇರಿಸುವ ಮೂಲಕ ಮಡಿವಾಳ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಒತ್ತು ನೀಡಬೇಕು ಎಂದು ಮುಖಂಡರಾದ ಮಾಲತೇಶ ವೈ., ಪ್ರಭಾಕರ, ವಿಜಯಲಕ್ಷ್ಮೀ, ಶಾಂತ ಪ್ರಭಾಕರ, ಅರ್ಚನಾ, ಮಂಜಪ್ಪ ಟೈಲರ್, ಪಿ. ಹನುಮಂತಪ್ಪ, ನಾಗರಾಜ ತಿಮ್ಮಾಪುರ, ವಿರೂಪಾಕ್ಷಪ್ಪ, ನಾಗೇಂದ್ರ, ಮಾಲತೇಶಪ್ಪ, ಗುಡ್ಡಪ್ಪ, ಕೃಷ್ಣಮೂರ್ತಿ, ರವೀಂದ್ರ, ಶಿವಕುಮಾರ, ನೀಲಪ್ಪ, ಸುರೇಶಪ್ಪ, ಚಂದ್ರಪ್ಪ
ಹಾಗೂ ಸಮುದಾಯದವರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.