ADVERTISEMENT

ಮಲ್ಲಿಕಾರ್ಜುನ ಸ್ವಾಮಿ ಅದ್ದೂರಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2020, 10:02 IST
Last Updated 6 ಮಾರ್ಚ್ 2020, 10:02 IST
ಶಿರಾಳಕೊಪ್ಪ ಹತ್ತಿರದ ತೊಗರ್ಸಿ ಗ್ರಾಮದಲ್ಲಿ ಮಲ್ಲಿಕಾಜುನ ಸ್ವಾಮಿ ಜಾತ್ರೆ ಅಂಗವಾಗಿ ಬುಧವಾರ ಸಂಜೆ ನಡೆದ 47ನೇ ವರ್ಷದ ಧಾರ್ಮಿಕ ಸಭೆಯನ್ನು ತಹಶೀಲ್ದಾರ ಎಂ.ಪಿ. ಕವಿರಾಜ್ ಉದ್ಘಾಟಿಸಿದರು.
ಶಿರಾಳಕೊಪ್ಪ ಹತ್ತಿರದ ತೊಗರ್ಸಿ ಗ್ರಾಮದಲ್ಲಿ ಮಲ್ಲಿಕಾಜುನ ಸ್ವಾಮಿ ಜಾತ್ರೆ ಅಂಗವಾಗಿ ಬುಧವಾರ ಸಂಜೆ ನಡೆದ 47ನೇ ವರ್ಷದ ಧಾರ್ಮಿಕ ಸಭೆಯನ್ನು ತಹಶೀಲ್ದಾರ ಎಂ.ಪಿ. ಕವಿರಾಜ್ ಉದ್ಘಾಟಿಸಿದರು.   

ಶಿರಾಳಕೊಪ್ಪ: ‘12ನೇ ಶತಮಾನದಲ್ಲಿ ಬಸವಾದಿ ಶರಣರು ಕಾಯಕ ಮತ್ತು ಪರಾಧೀನತೆಯ ಅರಿವನ್ನು ನಾಗರಿಕ ಸಮಾಜಕ್ಕೆ ಮುಟ್ಟಿಸುವ ಕೆಲಸ ಮಾಡಿದರು’ ಎಂದು ನಿವೃತ್ತ ಪ್ರಾಚಾರ್ಯ ಪಂಚಾಕ್ಷರಯ್ಯ ಹಿರೇಮಠ ಹೇಳಿದರು.

ಹತ್ತಿರದ ತೊಗರ್ಸಿ ಗ್ರಾಮದಲ್ಲಿ ಮಲ್ಲಿಕಾರ್ಜುನ ಸ್ವಾಮಿಯ ಜಾತ್ರೆ ನಿಮಿತ್ತ ಬುಧವಾರ ನಡೆದ 47ನೇ ವರ್ಷದ ಧಾರ್ಮಿಕ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ‘ಶ್ರೀಮಂತ ಭಾರತ’ ಮುಂದಿನ ಪೀಳಿಗೆಗೆ ಉಳಿಯಬೇಕಾದರೆ ಧಾರ್ಮಿಕತೆಯ ಅರಿವು ಮಾನವನಿಗೆ ಆಗಬೇಕು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ತಹಶೀಲ್ದಾರ್ ಎಂ. ಪಿ. ಕವಿರಾಜ್‌, ‘ಕಷ್ಟಗಳು ಬಂದಾಗ ದೇವರ ಬಳಿ ಪ್ರಾರ್ಥಿಸಬಹುದು, ಆದರೆ, ಅದಕ್ಕೆ ಪರಿಹಾರವನ್ನು ಗುರುಗಳು ತೋರಿಸುತ್ತಾರೆ. ಹಾಗಾಗಿ, ಎಲ್ಲರೂ ಗುರುವಿನ ಮೂಲಕ ಭಗವಂತನನ್ನು ಕಾಣುತ್ತಿದ್ದೇವೆ’ ಎಂದು
ಹೇಳಿದರು.

ADVERTISEMENT

ಕ್ಷೇತ್ರ ಶಿಕ್ಷಣಾಧಿಕಾರಿ ಉಮಾಮಹೇಶ್ವರ, ಇತಿಹಾಸ ಅಕಾಡೆಮಿ ಸದಸ್ಯ ರಮೇಶ್ ಬಿ. ಹಿರೇಜಂಬೂರು
ಮಾತನಾಡಿದರು.

ಜಡೆ ಹಿರೇಮಠದ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ, ಕೂಡ್ಲಿಯ ಸಿದ್ಧವೀರ ಸ್ವಾಮೀಜಿ, ಮಳೆ ಹಿರೇಮಠದ ಮಹಾಂತದೇಶೀಕೇಂದ್ರ ಸ್ವಾಮೀಜಿ, ಪಂಚವಣ್ಣಿಗೆ ಮಠದ ಚನ್ನವೀರದೇಶೀಕೇಂದ್ರ ಸ್ವಾಮೀಜಿ, ಮಳೇ ಹಿರೆಮಠದ ಕಿರಿಯ ಸ್ವಾಮೀಜಿ, ಕೂಡಲದ ಗುರು ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಹಿರೇಮಾಗಡಿಯ ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿದರು. ಸಿಪಿಐ ಬಸವರಾಜ್, ವಿಜಯ ನಾಡಿಗೇರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.