
ಪ್ರಜಾವಾಣಿ ವಾರ್ತೆ
ಸಾಗರ: ಇಲ್ಲಿನ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನವು ಮಾರಿಕಾಂಬಾ ಜಾತ್ರೆ ಅಂಗವಾಗಿ ಮಾರಿಕಾಂಬಾ ದೇವಿಯ ಉತ್ಸವ ಮೂರ್ತಿಗೆ ಎರಡು ಎಳೆಯ ಬಂಗಾರದ ಸರವನ್ನು ಸಿದ್ದಪಡಿಸಲು ನಿರ್ಧರಿಸಿದ್ದು ಇದಕ್ಕೆ ಭಕ್ತರು ಕಾಣಿಕೆ ರೂಪದಲ್ಲಿ ಬಂಗಾರ ನೀಡುವಂತೆ ಪ್ರತಿಷ್ಠಾನ ಕೋರಿದೆ.
2023ನೇ ಸಾಲಿನ ಜಾತ್ರೆ ಸಂದರ್ಭದಲ್ಲಿ ಭಕ್ತರು ಹಾಗೂ ಚಿನ್ನ, ಬೆಳ್ಳಿ ಅಂಗಡಿಯ ಮಾಲೀಕರು ದಾನವಾಗಿ ನೀಡಿದ್ದ 670 ಗ್ರಾಂ ತೂಕದ ಬಂಗಾರ ಪ್ರತಿಷ್ಠಾನದ ಬಳಿ ಇದೆ. ಉಳಿದಂತೆ ಕಾಣಿಕೆ ರೂಪದಲ್ಲಿ ಬರುವ ಬಂಗಾರವನ್ನು ಸೇರಿಸಿ ಎರಡು ಎಳೆಯ ನೂತನ ಸರ ತೊಡಿಸಲಾಗುವುದು ಎಂದು ಪ್ರತಿಷ್ಠಾನದ ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.